ಆರ್ಚರಿ: ಭಾರತ ಮಹಿಳೆಯರಿಗೆ ಕಂಚು

7

ಆರ್ಚರಿ: ಭಾರತ ಮಹಿಳೆಯರಿಗೆ ಕಂಚು

Published:
Updated:

ಕೋಲ್ಕತ್ತ (ಪಿಟಿಐ): ಭಾರತ ಮಹಿಳೆಯರ ತಂಡದವರು ಇರಾನ್‌ನ ಟೆಹರಾನ್‌ನಲ್ಲಿ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ರಿಕರ್ವ್ ಮತ್ತು ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಆದರೆ ಪುರುಷರು ನಿರಾಸೆ ಅನುಭವಿಸಿದರು.ದೀಪಿಕಾ ಕುಮಾರಿ, ಚೆಕ್ರವೊಲು ಸ್ವರೊ ಮತ್ತು ಲೈಶ್‌ರಾಮ್ ಬೊಂಬಲ್ಯ ದೇವಿ ಅವರನ್ನೊಳಗೊಂಡ ಭಾರತ ಮಹಿಳಾ ತಂಡ ರಿಕರ್ವ್ ವಿಭಾಗದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 190-175 ರಲ್ಲಿ ಚೀನಾ ವಿರುದ್ಧ ಜಯ ಸಾಧಿಸಿತು. ಜಪಾನ್ ತಂಡ ಚಿನ್ನ ಗೆದ್ದಕೊಂಡಿತು.ಕಾಂಪೌಂಡ್ ವಿಭಾಗದಲ್ಲಿ ಜಾನೊ ಹಂಸ್ದಾ, ಮಂಜುದಾ ಸೊಯ್ ಮತ್ತು ಜ್ಯೋತಿ ವಿ ಸುರೇಖಾ ಅವರನ್ನೊಳಗೊಂಡ ಭಾರತ 208-203 ರಲ್ಲಿ ಇರಾನ್ ತಂಡವನ್ನು ಮಣಿಸಿ ಕಂಚು ಪಡೆಯಿತು. ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೊನೇಷ್ಯ ಎದುರು ಸೋಲು ಅನುಭವಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry