ಆರ್ಚರಿ: ಶಿಬಿರ ಸ್ಥಳಾಂತರ

ಬುಧವಾರ, ಜೂಲೈ 17, 2019
26 °C

ಆರ್ಚರಿ: ಶಿಬಿರ ಸ್ಥಳಾಂತರ

Published:
Updated:

ಕೋಲ್ಕತ್ತ (ಪಿಟಿಐ): ಆರ್ಚರಿಗಳ ಒತ್ತಾಸೆಗೆ ಮಣಿದಿರುವ ಭಾರತ ಆರ್ಚರಿ ಸಂಸ್ಥೆ ರಾಷ್ಟ್ರೀಯ ಶಿಬಿರವನ್ನು ಪುಣೆಯಿಂದ ಮಹಾರಾಷ್ಟ್ರದ ಔರಂಗಾಬಾದ್‌ಗೆ ಸ್ಥಳಾಂತರ ಮಾಡಿದೆ.`ಇದೇ ವರ್ಷದ ಅಕ್ಟೋಬರ್‌ನಲ್ಲಿ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್ ನಡೆಯಲಿರುವ ಹಿನ್ನೆಲೆಯಲ್ಲಿ ಈ ಶಿಬಿರ ಆಯೋಜನೆಯಾಗಿದೆ. ಈಗ ಔರಂಗಬಾದ್‌ಗೆ ಸ್ಥಳಾಂತರಿಸಲಾಗಿದೆ' ಎಂದು ಆರ್ಚರಿ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಗುಂಜನ್ ಅಬ್ರೊಲ್ ತಿಳಿಸಿದ್ದಾರೆ.ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುತ್ತಿದ್ದ ಶಿಬಿರದ ವೇಳೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು.

ಹಿನ್ನೆಲೆಯಲ್ಲಿ ಶಿಬಿರವನ್ನು ಸ್ಥಳಾಂತರಿಸುವಂತೆ ಮಹಿಳಾ ಆರ್ಚರಿಗಳು ಬೇಡಿಕೆ ಇಟ್ಟಿದ್ದರು. 48 ಆರ್ಚರಿಗಳು ಈ ಶಿಬಿರದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry