ಆರ್ಚ್ ಬಿಷಪ್ಗೆ 75ನೇ ಹುಟ್ಟುಹಬ್ಬ ಸಂಭ್ರಮ

ಬೆಂಗಳೂರು: ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ಅವರ 75ನ ಹುಟ್ಟುಹಬ್ಬ ವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಧರ್ಮಗುರುಗಳು ಮತ್ತು ಹಲವಾರು ಗಣ್ಯರು ಮೊರಾಸ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಶುಭ ಹಾರೈಸಿದರು.
ರಾಜ್ಯದ ವಿವಿಧ ಕ್ರೈಸ್ತ ಧರ್ಮಪ್ರಾಂತ್ಯಗಳ ಬಿಷಪ್ಗಳಾದ ಮೈಸೂರಿನ ಡಾ. ಅಂತೋಣಿ ವಾಳಪಿಳ್ಳಿ, ಬೆಳಗಾವಿಯ ಪೀಟರ್ ಮಚಾದೊ, ಬಳ್ಳಾರಿ ಹೆನ್ರಿ ಡಿಸೋಜ, ಚಿಕ್ಕಮಗಳೂರಿನ ಥಾಮಸಪ್ಪ ಅಂತೋಣಿ ಸ್ವಾಮಿ, ಕಲಬುರ್ಗಿಯ ರಾಬರ್ಟ್ ಮೈಕೆಲ್ ಮಿರಾಂಡ, ಕಾರವಾರದ ಡೆರೆಕ್ ಫರ್ನಾಂಡಿಸ್, ಮಂಗಳೂರಿನ ಡಾ. ಅಲೋಷಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗದ ಫ್ರಾನ್ಸಿಸ್ ಸೆರಾವೊ, ಉಡುಪಿಯ ಜೆರಾಲ್ಡ್ ಐಸಾಕ್ ಲೋಬೊ, ಮಂಡ್ಯದ ಅಂತೋಣಿ ಕರೆಯಿಲ್ ಹಾಗೂ ಊಟಿಯ ಅಮಲ್ರಾಜ್ ಅವರು ಆರ್ಚ್ ಬಿಷಪ್ ಮೊರಾಸ್ ಅವರಿಗೆ ಶುಭಕೋರಿದರು.
ಸಂಜೆ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್, ಪೋಪ್ ಅವರ ಭಾರತದ ರಾಯಭಾರಿ ಅಪೊಸ್ತೊಲಿಕ್ ನೂನ್ಸಿಯೊ ಸಾಲ್ವತೋರ್ ಪೆನ್ನಾಕಿಯೊ ಹಾಗೂ ರಾಜ್ಯದ ಬಿಷಪ್ಗಳ ಸಮ್ಮುಖದಲ್ಲಿ ಬಲಿಪೂಜೆ ನಡೆಯಿತು. ಬಲಿಪೂಜೆಯಲ್ಲಿ ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಸಾಲ್ವತೋರೆ ಪೆನ್ನಾಕಿಯೊ ಅವರು ಮಾತನಾಡಿ, ‘ಕುರಿಗಾಹಿಯು ತಪ್ಪು ಹಾದಿ ಹಿಡಿಯುವ ಕುರಿ ಮುಂದೆಯನ್ನು ಸರಿದಾರಿಗೆ ತರುವಂತೆ ಧರ್ಮಗುರುವು ತಪ್ಪು ಮಾಡಿದ ಭಕ್ತರನ್ನು ಪ್ರೀತಿ ವಿಶ್ವಾಸಗಳಿಂದ ತಿದ್ದಿ ಸರಿದಾರಿಗೆ ತರಬೇಕು’ ಎಂದರು.
ಬಿಷಪ್ ಬರ್ನಾಡ್ ಮೊರಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊರಾಸ್ ಅವರ ಕುಟುಂಬ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.