`ಆರ್ಥಿಕತೆಗೆ ಹೈನುಗಾರಿಕೆ ಆಧಾರ'

7

`ಆರ್ಥಿಕತೆಗೆ ಹೈನುಗಾರಿಕೆ ಆಧಾರ'

Published:
Updated:
`ಆರ್ಥಿಕತೆಗೆ ಹೈನುಗಾರಿಕೆ ಆಧಾರ'

ಶಿಗ್ಗಾವಿ: `ರೈತ ಸಮೂಹಕ್ಕೆ ಕೃಷಿ ಜೊತೆಗೆ ಹೈನುಗಾರಿಕೆಯನ್ನು ಉಪ ಕಸು ಬನ್ನಾಗಿ ಮಾಡುವ ಮೂಲಕ ಆರ್ಥಿಕ ವಾಗಿ ಸದೃಢರಾಗಬೇಕು. ಅದರಿಂದ ರೈತ ಸಮೂಹ ಸ್ವಾವಲಂಬನೆ ಜೀವನ ನಡೆಸಲು ಸಾಧ್ಯವಿದೆ'  ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.ತಾಲ್ಲೂಕಿನ ಹುಲಗೂರ ಗ್ರಾಮದಲ್ಲಿ ನಡೆದ ಹುಲಗೂರ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ, ಧಾರ ವಾಡ ಹಾಲು ಉತ್ಪಾದಕರ ಒಕ್ಕೂಟ ಸುತ್ತ ಮುತ್ತಲಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ನಡೆದ ಮಿಶ್ರತಳಿ ಆಕಳು ಮತ್ತು ಕರುಗಳು ಹಾಗೂ ಸುಧಾರಿತ ಎಮ್ಮೆಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಶೇ 28ರಷ್ಟು ಕೃಷಿ ಜೊತೆಗೆ ಉಪ ಕಸಬನ್ನಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇದನ್ನು ಮುಖ್ಯ ಕಸಬನ್ನಾಗಿ ಪರಿವರ್ತನೆ ಮಾಡುವುದು ಅವಶ್ಯವಾಗಿದೆ. ಕ್ಷೇತ್ರದಲ್ಲಿ 8 ಸಂಘಗಳಿಗೆ ಒಟ್ಟು 200 ಹಸುಗಳನ್ನು ನೀಡಲಾಗಿದ್ದು, ಇನ್ನು 8 ಸಂಘಗಳಿಗೆ ಹಸುಗಳನ್ನು ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೆಎಂಎಫ್‌ಗೆ ಸುಮಾರು 13.5 ಕೋಟಿ ರೂಪಾಯಿ ಆರ್ಥಿಕ ಸಹಾಯ ನೀಡಿದ್ದರು. ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಪ್ರೋತ್ಸಾಹ ಧನ ನೀಡಲು ಯೋಜನೆ ರೂಪಿಸಿದ್ದರಿಂದ ಧಾರವಾಡ  ಕೆಎಂಎಫ್ ಉನ್ನತ ಮಟ್ಟಕ್ಕೆ ಬರಲು ಸಾಧ್ಯವಾಗಿದೆ ಎಂದರು.ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿದರು.

ಹುಲಗೂರ ಓಲೇಮಠದ ಡಾ. ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೌನೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.ಕೆಎಂಎಫ್ ನಿರ್ದೇಶಕ ವಿರೂಪಾಕ್ಷಪ್ಪ ವಿಜಾಪುರ, ಫಕ್ಕಿರಪ್ಪ ವಾಲ್ಮೀಕಿ, ಜಿ.ಪಂ. ಸದಸ್ಯರಾದ ಬಿ.ಟಿ. ಇನಾಮತಿ, ತಾ.ಪಂ. ಅಧ್ಯಕ್ಷೆ ಉಷಾ ಶಿವಾನಂದ ಬಿಳೆಕುದರಿ, ಸದಸ್ಯರಾದ ಲಕ್ಷ್ಮಿ ತೋಟದ, ವೀರನ ಗೌಡ್ರ ಪಾಟೀಲ, ನಿಂಗಣ್ಣ ಜವಳಿ, ತಿಪ್ಪಣ್ಣ ಸಾತಣ್ಣವರ, ದೇವಣ್ಣ ಚಾಕ ಲಬ್ಬಿ, ಹುಲಗೂರ ರೈತ ಸಂಘದ ಅಧ್ಯಕ್ಷ ಲಕ್ಷ್ಮಪ್ಪ ಹೊಣ್ಣನವರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೈರುನಬೀ ನೇರ್ತಿ,  ಡಾ. ವೀರೇಶ ತರಲಿ, ಡಾ. ಆರ್.ಎಸ್. ಹೆಗಡೆ, ಡಾ. ಎಸ್.ಎಸ್. ಪಾಟೀಲ, ಕೇಶವ ನಾಯಕ, ಶಶಿಕಲಾ ಪಾಳೇದ ಮತ್ತಿತರರು ಉಪಸ್ಥಿತರಿದ್ದರು.ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ಬಿ.ಬಿ. ವಾಡಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಲು ಉತ್ಪಾದ ಕರ ಸಹಕಾರಿ ಸಂಘದ ಅಧ್ಯಕ್ಷೆ ಶಿಲ್ಪಾ ಅಶೋಕ ಪಾಟೀಲ ಸಂಘದ ಕುರಿತು ವರದಿ ವಾಚನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry