ಗುರುವಾರ , ಮೇ 19, 2022
23 °C

ಆರ್ಥಿಕ ನೆರವು: ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಜೆ.ಪಿ.ನಗರ ಬ್ರಾಹ್ಮಣ ಸಭಾವು ನಗರದಲ್ಲಿ ನೆಲೆಸಿರುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ತಾಂತ್ರಿಕ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಜೂನ್ 26 ರೊಳಗೆ ಅರ್ಜಿ ಸಲ್ಲಿಸಬಹುದು.ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ ವಾರ್ಷಿಕ ಆದಾಯದ ದಾಖಲಾತಿ ಮತ್ತು ವರ್ಗಾವಣೆ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.ವಿಳಾಸ: ಜಂಟಿ ಕಾರ್ಯದರ್ಶಿ, ನಂ.545, 16 ನೇ ಅಡ್ಡರಸ್ತೆ, 35 ನೇ ಮುಖ್ಯರಸ್ತೆ, ಜೆ.ಪಿ.ನಗರ 6 ನೇ ಹಂತ. ಹೆಚ್ಚಿನ ಮಾಹಿತಿಗಾಗಿ 2664 5307 ಸಂಪರ್ಕಿಸಿ.ಪದಾಧಿಕಾರಿಗಳ ನೇಮಕ

ಬೆಂಗಳೂರು: ಬೆಂಗಳೂರು ಕ್ಲಬ್‌ಗೆ 2011-12ನೇ ಸಾಲಿಗೆ ಕೆಳಕಂಡವರು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.ಫರೂಜ್ ಸತ್ತರ್ ಸೇಟ್(ಅಧ್ಯಕ್ಷ) ಎಂ.ಕೆ.ಚಿದಂಬರಂ(ಉಪಾಧ್ಯಕ್ಷ), ಅಜಯ್ ತೊಷಿನಿವಾಲ್, ಪಿ.ವಿ, ಜಯಶಂಕರ್, ಟಿ.ಕೆಂಗಲ್ ಮೂರ್ತಿ, ಕೆ.ಸಿ.ಜೈನ್, ಸಿ.ಎನ್.ಕುಮಾರ್, ಜಿ.ವಿ.ರಾಧಾಕೃಷ್ಣನ್, ಸುನಿತ ಕುಮಾರ್ ಸಿದ್ದಣ್ಣ (ಕಾರ್ಯಕಾರಿ ಸಮಿತಿ ಸದಸ್ಯರು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.