ಆರ್ಥಿಕ ವೃದ್ಧಿ ದರ ಪರಿಷ್ಕರಣೆ

7

ಆರ್ಥಿಕ ವೃದ್ಧಿ ದರ ಪರಿಷ್ಕರಣೆ

Published:
Updated:

ನವದೆಹಲಿ (ಪಿಟಿಐ): 2010-11ನೇ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನು ಕೇಂದ್ರ ಸರ್ಕಾರವು ಪರಿಷ್ಕರಿಸಿದ್ದು, ಈ ಮೊದಲಿನ ಶೇ 8.5ರ ಬದಲಿಗೆ ಶೇ 8.4ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದೆ.ಬೆಲೆ ಸ್ಥಿರತೆ ಆಧರಿಸಿ ಹಿಂದಿನ ವರ್ಷದ ವೃದ್ಧಿ ದರಕ್ಕೆ ಹೋಲಿಸಿದರೆ `ಜಿಡಿಪಿ~ಯು ಶೇ 8.4ರಷ್ಟು ದಾಖಲಾಗಿದೆ ಎಂದು ಅಂಕಿ ಸಂಖ್ಯೆ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯ ತಿಳಿಸಿದೆ.`ಜಿಡಿಪಿ~ ವೃದ್ಧಿಗೆ ಸೇವಾ ವಲಯವು ಪ್ರಮುಖ ಕೊಡುಗೆ ನೀಡುತ್ತಿದೆ. ಈ ವಲಯವು  ಶೇ 9.3ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. 2010-11ನೇ ಸಾಲಿನಲ್ಲಿ ಕೃಷಿ ಬೆಳವಣಿಗೆ ಕೂಡ ಶೇ 7ರಷ್ಟು ವೃದ್ಧಿ ಕಂಡಿದೆ.ತಯಾರಿಕೆ, ಕಟ್ಟಡ ನಿರ್ಮಾಣ ರಂಗಗಳೂ ಶೇ 7.2ರಷ್ಟು ವೃದ್ಧಿ ದಾಖಲಿಸಿವೆ. ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ಉದ್ದಿಮೆ ವಹಿವಾಟು ಸೇವೆಗಳು ಶೇ 10.4ರಷ್ಟು ಬೆಳವಣಿಗೆ ಕಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry