ಶನಿವಾರ, ಮೇ 15, 2021
24 °C

ಆರ್ಥಿಕ ಸಂಕಷ್ಟದಲ್ಲಿ ದೇಶ: ಪ್ರಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದ ಆರ್ಥಿಕ ಕ್ಷೇತ್ರ ಬಹಳ ಸಂಕಷ್ಟದಲ್ಲಿದೆ ಎಂಬುದನ್ನು ಒಪ್ಪಿಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್, `ಕಷ್ಟದ ಈ ಸವಾಲುಗಳನ್ನು ಸೂಕ್ತ ರೀತಿ ಎದುರಿಸಿ ಪರಿಹಾರ ಕಂಡುಕೊಳ್ಳಲಾಗುವುದು~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಶನಿವಾರ `ಆರ್ಥಿಕ ಸುಧಾರಣೆಯಲ್ಲಿ ಸವಾಲುಗಳು~ ಚರ್ಚಾ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು, `ಕಷ್ಟಗಳೇ ಇಲ್ಲದಿದ್ದರೆ ಬದುಕಿಗೆ ಅರ್ಥವೇ ಇಲ್ಲ. ಕಷ್ಟಗಳಿಗೆ ಪರಿಹಾರವೂ ಇರುತ್ತದೆ. ನನಗೆ ವಿಶ್ವಾಸವಿದೆ, ನಾವು ಈ ಸಮಸ್ಯೆಯಿಂದ ಶೀಘ್ರವೇ ಹೊರಬರಲಿದ್ದೇವೆ~ ಎಂದರು.ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬರಾವ್, ಶಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್ ರಘುರಾಮ್ ಜಿ.ರಾಜನ್ ಮತ್ತು ಬಿಜಿನೆಸ್ ಸ್ಟಾಂಡರ್ಡ್‌ನ ಅಧ್ಯಕ್ಷ ಟಿ.ಎನ್.ನಿನನ್ ಉಪಸ್ಥಿತಿಯಲ್ಲಿ ನಡೆದ ಚರ್ಚೆಯಲ್ಲಿ ಒತ್ತಾಯಕ್ಕೆ ಒಳಗಾಗಿ ಮಾತನಾಡಿದ ಪ್ರಧಾನಿ, `ನಾನು ಈ ಕಾರ್ಯಕ್ರಮದ ಆಹ್ವಾನ ಸ್ವೀಕರಿಸುವಾಗಲೇ ಏನೂ ಮಾತನಾಡುವುದಿಲ್ಲ ಎಂಬ ಷರತ್ತು ವಿಧಿಸಿದ್ದೆ. ಹಾಗಾಗಿ ಅದನ್ನು ಮುರಿಯಲು ಇಚ್ಛಿಸುವುದಿಲ್ಲ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.