ಭಾನುವಾರ, ಮೇ 9, 2021
26 °C

`ಆರ್ಥಿಕ ಸಮಸ್ಯೆಗೆ ಕ್ಷಿಪ್ರ ಪರಿಹಾರ ಇಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ತಾತ್ಕಾಲಿಕ ಆರ್ಥಿಕ ಸಮಸ್ಯೆಗಳಿಗೆ ಕ್ಷಿಪ್ರ ಹಾಗೂ ಸುಲಭದ ಪರಿಹಾರ ಎಂಬುದು ಯಾವುದೂ ಇಲ್ಲ. ಸರ್ಕಾರ ದೀರ್ಘಾವಧಿ ಕ್ರಮಗಳ ಮೂಲಕವೇ ಆರ್ಥಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಶುಕ್ರವಾರ ಇಲ್ಲಿ ಹೇಳಿದರು.`ಜಿಡಿಪಿ'ಗೆ ಉತ್ತೇಜನ ನೀಡಲು ಮತ್ತು ಹೂಡಿಕೆ ಆಕರ್ಷಿಸಲು ಸರ್ಕಾರ ಈ ಮಾಸಾಂತ್ಯಕ್ಕೆ ಅಥವಾ ಮುಂದಿನ ತಿಂಗಳು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.2012-13ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಒಟ್ಟಾರೆ `ಜಿಡಿಪಿ'ಯ ಶೇ 4.9ಕ್ಕೆ ಪರಿಮಿತಗೊಳಿಸುವಲ್ಲಿ ಹಣಕಾಸು ಸಚಿವಾಲಯ ಯಶಸ್ವಿಯಾಗಿದೆ. 2013-14ರಲ್ಲಿ ಇದು ಶೇ 4.8ಕ್ಕೆ ಇಳಿಕೆ ಕಾಣಬಹುದು ಎಂದರು.ಬೃಹತ್ ಯೋಜನೆಗೆ ಶೀಘ್ರ ಅನುಮತಿ

ನವದೆಹಲಿ(ಪಿಟಿಐ):
ಬಂಡವಾಳ ಹೂಡಿಕೆ ಚಟುವಟಿಕೆಯನ್ನು ಹೆಚ್ಚಿಸುವ ಸಲುವಾಗಿ ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಇಲ್ಲಿ ಹೇಳಿದರು.ಒಟ್ಟು 250ಕ್ಕೂ ಹೆಚ್ಚು ಖಾಸಗಿ ಕ್ಷೇತ್ರದ ಬೃಹತ್ ಯೋಜನೆಗಳು ಪ್ರಸ್ತುತ ಬಾಕಿಯಾಗಿದ್ದು, ಇವುಗಳಲ್ಲಿ 30ರಿಂದ 40ರಷ್ಟು ಯೋಜನೆಗಳಿಗೆ ಕೇಂದ್ರ ಸರ್ಕಾರ ಶೀಘ್ರ ಅನುಮತಿ ನೀಡಿ ಪ್ರೋತ್ಸಾಹಿಸುವ ಸಾಧ್ಯತೆ ಇದೆ. ಇದರಿಂದ ಬಂಡವಾಳದ ಹರಿವು ಹೆಚ್ಚಿ ದೇಶದ ಪ್ರಗತಿಗತಿ ವೇಗ ಪಡೆದುಕೊಳ್ಳಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ  ಹೇಳಿದರು.ರೂಪಾಯಿ ತೀವ್ರ ಸ್ವರೂಪದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರುವುದಕ್ಕೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳ ರೂಪಾಯಿ ಮೌಲ್ಯ ಹೆಚ್ಚಿಸಲು ಬೇಕಾದ ಕ್ರಮ ಕೈಗೊಳ್ಳಲಿವೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.