ಆರ್ಥಿಕ ಸ್ವಾವಲಂಬನೆಗಾಗಿ ಜವಳಿ ಉದ್ಯಮ

7

ಆರ್ಥಿಕ ಸ್ವಾವಲಂಬನೆಗಾಗಿ ಜವಳಿ ಉದ್ಯಮ

Published:
Updated:

ಮಡಿಕೇರಿ: ದೇಶದಲ್ಲಿ ಜವಳಿ ಉದ್ಯ ಮಕ್ಕೆ ವಿಪುಲ ಅವಕಾಶಗಳಿದ್ದು, ಈ ಉದ್ಯಮದಲ್ಲಿ ನಿರುದ್ಯೋಗಿಗಳು ತೊಡಗಿಸಿಕೊಂಡು ಆರ್ಥಿಕವಾಗಿ ಸ್ವಾವ ಲಂಬಿ ಬದುಕು ನಡೆಸುವಂತಾಗಲು ಪ್ರಯತ್ನಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಬಾಲಭವನದಲ್ಲಿ ಸೋಮ ವಾರ ನಡೆದ ಸುವರ್ಣ ವಸ್ತ್ರ ನೀತಿ ಯೋಜನೆಯಡಿ ಜವಳಿ ಉದ್ದಿಮೆ ದಾರರಿಗೆ 6 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.ಜವಳಿ ಉದ್ಯಮವನ್ನು ಮನೆಯ ಲ್ಲಿಯೇ ಕುಳಿತು ನಿರ್ಮಿಹಿಸಬಹು ದಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುವಂತಹ ಅತ್ಯುತ್ತಮ ವಾದ ಉದ್ಯಮವಾಗಿದೆ. ಬೆಂಗಳೂರಿ ನಲ್ಲಿ ಸುಮಾರು 5 ಲಕ್ಷ ಮಂದಿ ಜವಳಿ ಉದ್ಯೋಗದಲ್ಲಿ ತೊಡಗಿಸಿಕೊಂಡಿ ದ್ದಾರೆ ಎಂದು ಅವರು ತಿಳಿಸಿದರು.ರಾಜ್ಯದ ರೇಷ್ಮೆ, ಹತ್ತಿ ಬೆಳೆಗಳಿಗೆ ಪ್ರಸಿದ್ಧವಾಗಿರುವುದರಿಂದ ಜವಳಿ ಕ್ಷೇತ್ರ ದಲ್ಲಿ ಉತ್ಪಾದಿಸಿದ ಉತ್ಪನ್ನಗಳಿಗೆ ವಿದೇಶದಲ್ಲಿ ಬೇಡಿಕೆ ಇದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸುವರ್ಣ ವಸ್ತ್ರ ನೀತಿ ಯೋಜನೆಯನ್ನು ಜಾರಿಗೊಳಿಸಿ ಜವಳಿ ಉದ್ಯಮವನ್ನು ಉತ್ತೇಜಿಸಿ ನಿರುದ್ಯೋಗಿಗಳಿಗೆ ಜವಳಿ ಉದ್ಯಮ ಶೀಲತಾ ತರಬೇತಿಯನ್ನು ನಡೆಸುತ್ತಿದ್ದು, ಇದರ ಪ್ರಯೋಜನವನ್ನು ಪಡೆದು ಆರ್ಥಿಕವಾಗಿ ಸದೃಢರಾಗಲು ಮುಂದಾ ಗಬೇಕು ಎಂದು ಅವರು ಹೇಳಿದರು.ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನಾ ನಿರ್ದೇಶಕರಾದ ವಿಜಯ ಕುಮಾರ್ ಬಿ. ನಿರಾಳೆ ಅವರು ಮಾತನಾಡಿ ಜವಳಿ ಉದ್ಯಮದಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ. ಜವಳಿ ಉದ್ಯಮ ದಲ್ಲಿ ರಾಷ್ಟ್ರ ಪ್ರಥಮ ಸ್ಥಾನ ಪಡೆ ಯುವಂತಾಗಲು ಕೊಡಗು ಜಿಲ್ಲೆ ಯಲ್ಲಿಯೂ ಸಹ ಜವಳಿ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಿದೆ ಎಂದು ಅವರು ಹೇಳಿದರು.ದೇಶದಲ್ಲಿ 32ರಷ್ಟು ಗಾರ್ಮೇಂಟ್ಸ್ ಉದ್ಯಮವಿದ್ದು, ಹೆಚ್ಚಿನ ಯುವಕ/ ಯುವತಿಯರು ಈ ಉದ್ಯಮದಲ್ಲಿ ಉದ್ಯೋಗ ನಿರತರಾಗಿದ್ದಾರೆ. ಅವರಲ್ಲಿ ಶೇ.90ರಷ್ಟು ಮಹಿಳೆಯರೇ ಇದ್ದು ಕುಟುಂಬದ ಜೀವನ ರೂಪಿಸಿಕೊಂಡಿ ದ್ದಾರೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನಾ ನಿರ್ದೇಶಕರು ತಿಳಿಸಿದರು.ರಾಜ್ಯದಲ್ಲಿ 10 ಕೋಟಿ ರೂಪಾಯಿ ಯಷ್ಟು ಜವಳಿ ಉದ್ಯಮದಲ್ಲಿ ಬಂಡ ವಾಳ ಹೂಡಲಾಗಿದ್ದು, 5 ಲಕ್ಷ ಯುವ ಜನರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಕಳೆದ 3 ವರ್ಷಗಳಲ್ಲಿ 4 ಸಾವಿರ ಕೋಟಿ ಬಂಡವಾಳ ಹೂಡ ಲಾಗಿದ್ದು, ಜವಳಿ ಉದ್ಯಮ ಬೆಂಗಳೂರಿಗೆ ಸೀಮಿತವಾಗದೆ ಇತರೆ ಎಲ್ಲಾ ಭಾಗಗಳಲ್ಲಿಯೂ ವಿಸ್ತರಿಸು ವಂತಾಗಬೇಕು ಎಂದು ಅವರು ತಿಳಿಸಿದರು.ಜಿ.ಪಂ. ಯೋಜನಾ ನಿರ್ದೇಶಕರಾದ ಪ್ರಭುಸ್ವಾಮಿ ಅವರು ಮಾತನಾಡಿ ಜಿ.ಪಂ., ತಾ.ಪಂ. ವತಿಯಿಂದ ನಿರುದ್ಯೋಗಿಗಳಿಗೆ ವಿವಿಧ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಶೇ.15 ರಷ್ಟು ಮಂದಿ ಮಾತ್ರ ಯಶಸ್ಸು ಗಳಿಸು ತ್ತಿದ್ದಾರೆ. ಇದು ತಪ್ಪಬೇಕು. ತರಬೇತಿ ಪಡೆದವರೆಲ್ಲರೂ ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮುನ್ನಡೆ ಯಬೇಕು ಎಂದು ಸಲಹೆ ಮಾಡಿದರು.ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ ಅವರು ಮಾತ ನಾಡಿ ಇಂದಿನ ಯುವಜನರು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಕಠಿಣ ಪರಿ ಶ್ರಮ, ಶ್ರದ್ಧೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸನ್ನು ಕಾಣಬಹುದು. ಇದಕ್ಕೆ ಉತ್ತಮ ಉದಾಹರಣೆ ಇನ್‌ಫೋಸಿಸ್, ಎಂ.ಟಿ.ಆರ್ ಮತ್ತಿತರ ಉದ್ಯಮಗಳು ಸಾಕ್ಷಿಯಾಗಿವೆ ಎಂದರು.ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕರಾದ ರಾಜಯ್ಯ, ಕೈಗಾರಿಕಾ ಉತ್ತೇಜನಾ ಧಿಕಾರಿ ರಾಜಪ್ಪ ಮತ್ತಿತರರು ಉಪ ಸ್ಥಿತರಿದ್ದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ರಾದ ಜಿ.ಎಸ್.ಗುರುಸ್ವಾಮಿ ಸ್ವಾಗತಿಸಿ ದರು. ಪುಷ್ಪ ಸದಾನಂದ ಪ್ರಾರ್ಥಿಸಿ ದರು. ಶಶಿಕುಮಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry