ಗುರುವಾರ , ಜೂನ್ 17, 2021
29 °C

ಆರ್ಥಿಕ ಸ್ವಾವಲಂಬನೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸ್ವಾವಲಂಬನೆ ದಾರಿಯಲ್ಲಿ ದಿಟ್ಟವಾಗಿ ನಡೆಯಬೇಕು ಎಂದು ನಗರಸಭೆ ಆಯುಕ್ತೆ ಆರ್.ಶಾಲಿನಿ ಅಭಿಪ್ರಾಯಪಟ್ಟರು.ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಗುರುವಾರ ಲಕ್ಷ್ಮಿ ನಿರಂತರ ಉಳಿತಾಯ ಗುಂಪು ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮನೆ ನಿರ್ವಹಣೆ ಸೇರಿದಂತೆ ಮಹಿಳೆಯರು ಬಹಳಷ್ಟು ಕ್ಷೇತ್ರಗಳಲ್ಲಿ ಪರಿಶ್ರಮ ಸಾಧಿಸಿದ್ದಾರೆ. ಆರ್ಥಿಕ ಸ್ವಾವಲಂಬನೆ ಅವರ ಆತ್ಮವಿಶ್ವಾಸ ಹೆಚ್ಚು ಮಾಡುತ್ತದೆ ಎಂದರು.ಹಣಕಾಸಿನ ವಿಚಾರಗಳಲ್ಲಿ ಪುರುಷರನ್ನು ಅವಲಂಬಿಸದೆ ಬದುಕು ನಡೆಸುವ ಉತ್ತಮ ದಾರಿಗಳನ್ನು ಮಹಿಳೆಯರು ಕಂಡುಕೊಳ್ಳಬೇಕು. ಸ್ತ್ರೀಶಕ್ತಿ ಸಂಘಗಳ ಮೂಲಕ ಹಣ ಉಳಿತಾಯ, ಸ್ವಯಂಕೃಷಿ, ಹಲವು ಉತ್ಪನ್ನಗಳ ತಯಾರಿಕೆ, ಹೆಚ್ಚಿನ ವಿದ್ಯಾಭ್ಯಾಸ ಮತ್ತಿತರ ಅಂಶಗಳ ಕಡೆಗೆ ಗಮನ ಹರಿಸಬೇಕು. ಅವುಗಳಿಗಾಗಿ ದಿನದಲ್ಲಿ ಸ್ವಲ್ಪ ಸಮಯವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂದು ಹೇಳಿದರು.ಸಮುದಾಯ ವ್ಯವಹಾರ ಅಧಿಕಾರಿ ಶಿವಪ್ರಕಾಶ್, ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಯರಿಗೂ ಪ್ರಮುಖ ಸ್ಥಾನ ಲಭಿಸುತ್ತಿದೆ. ಇಂಥ ಸಂದರ್ಭದಲ್ಲಿ ಮಹಿಳಾ ಸಮುದಾಯ ಹೆಚ್ಚು ಸಂಘಟಿತರಾಗಬೇಕು ಎಂದು ಅಭಿಪ್ರಾಯಪಟ್ಟರು.ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಸ್. ಎಚ್.ಚೌಡಪ್ಪ, ಗುಂಪಿನ ಪ್ರಮುಖರಾದ ಭಾಗ್ಯಲಕ್ಷ್ಮಿ, ಕೌಶಲ್ಯ ಅಭಿವೃದ್ಧಿ ತಜ್ಞ ಗೋವಿಂದಮೂರ್ತಿ, ಸಮುದಾಯ ಸಂಘಟಕರಾದ ಬೀಬಿ ಕುತೇಜ ಮತ್ತು ರಾಜೇಶ್ವರಿ, ನೃತ್ಯ ಕಲಾವಿದ ಮಹೇಶರಾವ್ ಕದಂ, ಸಿ.ಜಿ.ಮುರಳಿ ವೇದಿಕೆಯಲ್ಲಿದ್ದರು. ಶರಣಪ್ಪ ಗಬ್ಬೂರು ನಿರೂಪಿಸಿದರು. ಇದೇ ಸಂದರ್ಭದಲ್ಲಿ, ವಿವಿಧ ಉಳಿತಾಯ ಗುಂಪುಗಳ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.