ಬುಧವಾರ, ನವೆಂಬರ್ 20, 2019
20 °C

ಆರ್.ಪಿ. ಗೋಯೆಂಕಾ ನಿಧನ

Published:
Updated:
ಆರ್.ಪಿ. ಗೋಯೆಂಕಾ ನಿಧನ

ಕೋಲ್ಕತ್ತ (ಪಿಟಿಐ):  ಉದ್ಯಮಿ ರಾಮ್ ಪ್ರಸಾದ್ ಗೋಯೆಂಕಾ ಅವರು ಸ್ವಲ್ಪ ಕಾಲದ ಅನಾರೋಗ್ಯದಿಂದಾಗಿ ಭಾನುವಾರ ಬೆಳಿಗ್ಗೆ ಕೋಲ್ಕತ್ತದ ಸ್ವಗೃಹದಲ್ಲಿ ನಿಧನ ಹೊಂದಿದರು.83 ವರ್ಷದ ಗೋಯೆಂಕಾ ಅವರಿಗೆ ಪತ್ನಿ ಸುಶೀಲಾ ಹಾಗೂ ಪುತ್ರರಾದ ಹರ್ಷ ವರ್ಧನ್ ಮತ್ತು ಸಂಜೀವ್ ಇದ್ದಾರೆ.ಕೇಶವ್ ಪ್ರಸಾದ್ ಗೋಯೆಂಕಾ ಅವರ ಪುತ್ರ.  1979ರಲ್ಲಿ ಆರ್‌ಪಿಜಿ ಎಂಟರ್‌ಪ್ರೈಸಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದರು. ರೂ 100 ಕೋಟಿ  ವಹಿವಾಟು ಹೊಂದಿದ್ದ ಈ ಸಂಸ್ಥೆಯ ಅಧೀನದಲ್ಲಿ   ಫಿಲಿಪ್ಸ್ ಕಾರ್ಬನ್  ಬ್ಲಾಕ್, ಏಷಿಯನ್ ಕೇಬಲ್ಸ್, ಅಗರ್ಪರಾ ಸೆಣಬಿನ ಕಾರ್ಖಾನೆ ಮತ್ತು ಮುರ್ಫಿ ಇಂಡಿಯಾ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದವು.

ಪ್ರತಿಕ್ರಿಯಿಸಿ (+)