ಬುಧವಾರ, ಡಿಸೆಂಬರ್ 11, 2019
22 °C

ಆರ್ಮಿ ರೆಡ್ ತಂಡಕ್ಕೆ ಸುಲಭ ಗೆಲುವು

Published:
Updated:
ಆರ್ಮಿ ರೆಡ್ ತಂಡಕ್ಕೆ ಸುಲಭ ಗೆಲುವು

ಬೆಂಗಳೂರು: ಆರ್ಮಿ ರೆಡ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ‘ಓಜೋನ್ ಗ್ರೂಪ್’ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್ಮಿ ರೆಡ್ ತಂಡ 2-0 ಗೋಲುಗಳಿಂದ ಫೋರ್ಟಿಸ್ ತಂಡವನ್ನು ಮಣಿಸಿತು.ಇಗ್ಲೇಸ್ ಟಿರ್ಕಿ ಹಾಗೂ ಎಸ್. ಅರ್ಮುಗಮ್ ಅವರು ಕ್ರಮವಾಗಿ 55 ಮತ್ತು 69ನೇ ನಿಮಿಷದಲ್ಲಿ ಗೋಲು ಗಳಿಸಿ ಆರ್ಮಿ ರೆಡ್ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಿರಲಿಲ್ಲ.ಮತ್ತೊಂದು ಪಂದ್ಯದಲ್ಲಿ ವಿ.ಆರ್. ರಘುನಾಥ್ ತಂದಿತ್ತ ನಾಲ್ಕು ಗೋಲುಗಳ ನೆರವಿನಿಂದ ಐಒಸಿಎಲ್ ತಂಡ 5-0 ಗೋಲುಗಳಿಂದ ನಾಮಧಾರಿ ಇಲೆವನ್ ತಂಡವನ್ನು ಸುಲಭವಾಗಿ ಪರಾಭವಗೊಳಿಸಿತು. ರಘುನಾಥ್ 4, 13, 58 ಹಾಗೂ 65ನೇ ನಿಮಿಷದಲ್ಲಿ ಗೋಲು ತಂದಿತ್ತರು. ಇನ್ನೊಂದು ಗೋಲನ್ನು ಜೆ.ಆರ್. ಗಗನ್‌ದೀಪ್ (25) ಗಳಿಸಿದರು. ಪಂದ್ಯದ ಮೊದಲಾರ್ಧದಲ್ಲಿ 3-0 ಗೋಲುಗಳ ಮುನ್ನಡೆ  ಸಾಧಿಸಿದ್ದ ಐಒಸಿಎಲ್ ತಂಡ ದ್ವಿತಿಯಾರ್ಧದಲ್ಲಿಯೂ ಉತ್ತಮ ಆಟವಾಡಿ ಗೆಲುವನ್ನು ತನ್ನದಾಗಿಸಿಕೊಂಡಿತು.ಮತ್ತೊಂದು ಪಂದ್ಯದಲ್ಲಿ ಏರ್ ಇಂಡಿಯಾ ತಂಡವು 1-0 ಗೋಲಿನಿಂದ ಎಸ್‌ಎಐ ತಂಡದ ಎದುರು ಗೆಲುವು ಪಡೆಯಿತು. ಶಿವೇಂದರ್ ಸಿಂಗ್ 41ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಏರ್ ಇಂಡಿಯಾ ತಂಡದ ಗೆಲುವಿನ ರೂವಾರಿಯೆನಿಸಿದರು.ಭಾನುವಾರದ ಪಂದ್ಯಗಳು: ಎಎಸ್‌ಸಿ-ಎಂಎಲ್‌ಐ (ಮಧ್ಯಾಹ್ನ 2.15), ಎಸ್‌ಎಐ-ನಾಮಧಾರಿ ಇಲೆವೆನ್ (ಮಧ್ಯಾಹ್ನ 3.45), ಬಿಪಿಸಿಎಲ್-ಆರ್ಮಿ ರೆಡ್ (ಸಂಜೆ 5.30).

ಪ್ರತಿಕ್ರಿಯಿಸಿ (+)