ಮಂಗಳವಾರ, ಜೂನ್ 22, 2021
27 °C

ಆರ್‌ಆರ್ ಸಂಖ್ಯೆ ಸಂಗ್ರಹ: ಪಡಿತರ ವಿತರಕರ ಸಂಘ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಜಾಗೃತ ಸಮಿತಿಗಳನ್ನು ರಚಿಸುವ ಪ್ರಸ್ತಾಪ ಮತ್ತು ಪಡಿತರ ಚೀಟಿದಾರರಿಂದ ಅವರ ಮನೆಯ ವಿದ್ಯುತ್ ಸಂಪರ್ಕದ ಆರ್‌ಆರ್ ಸಂಖ್ಯೆ ಸಂಗ್ರಹಿಸಬೇಕು ಎಂಬ ನಿರ್ದೇಶನವನ್ನು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ವಿರೋಧಿಸಿದೆ.ಸರ್ಕಾರದ ಈ ಕ್ರಮ ನ್ಯಾಯಬೆಲೆ ಅಂಗಡಿಗಳ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಲಿದೆ. ಈ ಕ್ರಮಕ್ಕೆ ಪಡಿತರ ವಿತರಕರ ಸ್ಪಷ್ಟ ವಿರೋಧವಿದೆ. ಯಾವುದೇ ಕಾರಣಕ್ಕೂ ವಿತರಕರ ಮೇಲೆ ಹೆಚ್ಚಿನ ಒತ್ತಡ ಆಗದಂತೆ ನೋಡಿಕೊಳ್ಳಬೇಕು ಎಂದು ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ (ಕೆ.ಕೆ) ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೃತ ಸಮಿತಿಗಳನ್ನು ರಚನೆ ಮಾಡುವುದರಿಂದ ಪರೋಕ್ಷವಾಗಿ ಸಮಿತಿ ಸದಸ್ಯರ ಒತ್ತಡವೂ ವಿತರಕರ ಮೇಲೆ ಆಗುತ್ತದೆ. ಹೀಗಾಗಿ, ಇದು ಸರಿ ಯಲ್ಲ. ಬೇಕಿದ್ದರೆ, ನ್ಯಾಯಬೆಲೆ ಅಂಗಡಿ ಗಳ ಮೇಲ್ವಿಚಾರಣೆಯನ್ನು ಅಧಿಕಾರಿ ಗಳೇ ಮಾಡಲಿ ಅಥವಾ ಪಂಚಾಯಿತಿ ಗಾದರೂ ವಹಿಸಲಿ ಎಂದರು.ಪಡಿತರ ವಿತರಣೆಗೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಈಚೆಗೆ ನೀಡಿದ ಹೇಳಿಕೆಯನ್ನು ಖಂಡಿಸಿದ ಅವರು, ಅಧಿಕಾರಿಗಳು ಮೊದಲು ಗೋದಾಮು ಹಂತದಲ್ಲಿ ಇರುವ ಲೋಪವನ್ನು ಸರಿಪಡಿಸಲು ಒತ್ತುನೀಡಲಿ ಎಂದು ಸಲಹೆ ಮಾಡಿದರು.ಮಾ. 27 ಪ್ರತಿಭಟನೆ: ಕೇಂದ್ರ ನೂತನವಾಗಿ ಜಾರಿಗೆ ತಂದಿರುವ ಆಹಾರ ಭದ್ರತಾ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ಎಲ್ಲ ಜಿಲ್ಲೆಗಳ ಪಡಿತರ ವಿತರಕರು ಒಟ್ಟಾಗಿ ಮಾರ್ಚ್ 27ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.ಜಿಲ್ಲೆಯಿಂದಲೂ ಈ ಪ್ರತಿಭಟನೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು. ಆಸಕ್ತ ವಿತರಕರು ಆದಷ್ಟು ಶೀಘ್ರ ಸಂಬಂಧಿದ ತಾಲ್ಲೂಕು, ಜಿಲ್ಲಾ ಅಧ್ಯಕ್ಷರುಗಳಿಗೆ ವಿವರವನ್ನು ನೀಡಬೇಕು ಎಂದು ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.