ಆರ್‌ಎನ್‌ಎಸ್ ಸಂಸ್ಥೆ ಮೇಲೆ ಐ.ಟಿ ದಾಳಿ

7

ಆರ್‌ಎನ್‌ಎಸ್ ಸಂಸ್ಥೆ ಮೇಲೆ ಐ.ಟಿ ದಾಳಿ

Published:
Updated:
ಆರ್‌ಎನ್‌ಎಸ್ ಸಂಸ್ಥೆ ಮೇಲೆ ಐ.ಟಿ ದಾಳಿ

ಬೆಂಗಳೂರು/ಹುಬ್ಬಳ್ಳಿ: ರಾಜ್ಯದ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿರುವ ಉದ್ಯಮಿ ಆರ್.ಎನ್.ಶೆಟ್ಟಿ ಅವರ ಒಡೆತನದ ಕಚೇರಿಗಳು ಹಾಗೂ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿದರು.ಬೆಂಗಳೂರಿನ ವಸಂತನಗರದಲ್ಲಿರುವ ಶೆಟ್ಟಿ ಅವರ ನಿವಾಸ, ಎಂ.ಜಿ.ರಸ್ತೆ ಬಳಿ ಇರುವ ಆರ್.ಎನ್.ಶೆಟ್ಟಿ ಸಮೂಹ ಸಂಸ್ಥೆಗಳ ಕೇಂದ್ರ ಕಚೇರಿ, ಮುರ್ಡೇಶ್ವರ ಸೆರಾಮಿಕ್ಸ್ ಲಿಮಿಟೆಡ್, ಯಶವಂತಪುರದಲ್ಲಿರುವ ಆರ್‌ಎನ್‌ಎಸ್ ಮೋಟಾರ್ಸ್‌ ಲಿಮಿಟೆಡ್, ಹುಬ್ಬಳ್ಳಿಯಲ್ಲಿರುವ ಆರ್.ಎನ್.ಶೆಟ್ಟಿ ಸಮೂಹ ಸಂಸ್ಥೆಗಳ ಶಾಖಾ ಕಚೇರಿ, ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್, ಆರ್‌ಎನ್‌ಎಸ್ ಕಾರು ಮಾರಾಟ ಮಳಿಗೆ, ನವೀನ್ ಹೋಟೆಲ್ಸ್ ಲಿಮಿಟೆಡ್, ಮುರ್ಡೇಶ್ವರ ಸೆರಾಮಿಕ್ಸ್ ಕಾರ್ಖಾನೆಯ ಮೇಲೆ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಂಜೆವರೆಗೂ ತೀವ್ರ ತಪಾಸಣೆ ನಡೆಸಿದರು.ಶೆಟ್ಟಿ ಅವರು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಒಡೆತನದ ಕಚೇರಿಗಳ ಮೇಲೆ ದಾಳಿ ನಡೆಸಿ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಅಂತೆಯೇ ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಶೆಟ್ಟಿ ಅವರ ಮಾಲೀಕತ್ವದ ಹೋಟೆಲ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳ ಕಚೇರಿಗಳಲ್ಲೂ ತಪಾಸಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry