ಆರ್‌ಎಸ್‌ಎಸ್ ಪ್ರಾಂತ ಸಂಘಚಾಲಕರಾಗಿ ವೆಂಕಟರಾಮ ಆಯ್ಕೆ

6

ಆರ್‌ಎಸ್‌ಎಸ್ ಪ್ರಾಂತ ಸಂಘಚಾಲಕರಾಗಿ ವೆಂಕಟರಾಮ ಆಯ್ಕೆ

Published:
Updated:

ಬೆಂಗಳೂರು: ಹಿರಿಯ ಸಾಮಾಜಿಕ ಕಾರ್ಯಕರ್ತ ಎಂ. ವೆಂಕಟರಾಮ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಸಂಘಚಾಲಕರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಚುನಾಯಿತರಾಗಿದ್ದಾರೆ.ಆರ್‌ಎಸ್‌ಎಸ್‌ನ ರಾಜ್ಯ ಕಚೇರಿ `ಕೇಶವ ಕೃಪಾ~ದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ವೆಂಕಟರಾಮ ಅವರು ಪ್ರಾಂತ ಸಂಘಚಾಲಕರಾಗಿ ಅವಿರೋಧವಾಗಿ ಪುನರಾಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ವೆಂಕಟರಾಮ  2006ರಿಂದಲೂ ಪ್ರಾಂತ ಸಂಘಚಾಲಕ ಹುದ್ದೆಯಲ್ಲಿದ್ದಾರೆ. ಡಾ. ವಾಮನ ಶೆಣೈ ಮಂಗಳೂರು ವಿಭಾಗದ ನೂತನ ಸಂಘಚಾಲಕರಾಗಿ ಚುನಾಯಿತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry