ಆರ್‌ಐಎನ್‌ಎಲ್:ಹೂಡಿಕೆ ಪ್ರಕಟ

7

ಆರ್‌ಐಎನ್‌ಎಲ್:ಹೂಡಿಕೆ ಪ್ರಕಟ

Published:
Updated:
ಆರ್‌ಐಎನ್‌ಎಲ್:ಹೂಡಿಕೆ ಪ್ರಕಟ

ಬೆಂಗಳೂರು: ಕರ್ನಾಟಕದಲ್ಲಿ ವಾರ್ಷಿಕ ಮೂರು ದಶಕಲಕ್ಷ ಟನ್ ತಯಾರಿಕಾ ಸಮಾರ್ಥ್ಯದ ಉಕ್ಕು ಘಟಕವನ್ನು ಜಂಟಿ ಸಹಭಾಗಿತ್ವದಲ್ಲಿ ಪ್ರಾರಂಭಿಸುವುದಾಗಿ ರಾಷ್ಟ್ರೀಯ ಇಷ್ಪತ್ ನಿಗಮ್ ಲಿಮಿಟೆಡ್/ವೈಜಾಗ್ ಸ್ಟೀಲ್(ಆರ್‌ಐಎನ್‌ಎಲ್) ಹೇಳಿದೆ.‘ನವರತ್ನ’ ಶ್ರೇಣಿ  ಹೊಂದಿರುವ ‘ಆರ್‌ಐಎನ್‌ಎಲ್’ ಸ್ಥಗಿತಗೊಂಡಿರುವ ಕುದುರೆಮುಖ ಕಬ್ಬಿಣದ ಅದಿರು ತಯಾರಿಕಾ ಕಂಪೆನಿಯ ಸೌಲಭ್ಯಗಳನ್ನು ಬಳಸಿಕೊಂಡು ಈ ಘಟಕವನ್ನು ಪ್ರಾರಂಭಿಸಲಿದೆ.ಸುಪ್ರೀಂಕೋರ್ಟ್ ಪಶ್ಚಿಮ ಘಟ್ಟ ವಲಯದಲ್ಲಿ ಗಣಿಗಾರಿಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಕುದುರೆ ಮುಖ ಘಟಕ ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದೆ.ಕರ್ನಾಟಕದಲ್ಲಿ ಈ ಜಂಟಿ ಹೂಡಿಕೆಯ ಮೊತ್ತ 15,000 ಕೋಟಿ ಎಂದು ಆರ್‌ಐಎನ್‌ಎಲ್’ನ ಅಧ್ಯಕ್ಷ ಪ್ರದೀಪ್ ಕುಮಾರ್ ಬಿಷ್ಣೋಯಿ ಇಲ್ಲಿ ತಿಳಿಸಿದರು.  ಕರ್ನಾಟಕದಲ್ಲಿ ಗ್ರಾಮೀಣ ಡೀಲರ್‌ಶಿಪ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕುದುರೆ ಮುಖ  ಘಟಕದಲ್ಲಿ  (ಕೆಐಒಸಿಎಲ್)  ಸಾಕಷ್ಟು ಪ್ರಮಾಣದ ಕಬ್ಬಿಣ ಅದಿರು ಬಳಕೆಯಾಗದೆ ಉಳಿದಿದೆ.‘ಆರ್‌ಐಎನ್‌ಎಲ್’ ಇದನ್ನು ಬಳಸಿಕೊಂಡು ಉಕ್ಕು ತಯಾರಿಕಾ ಘಟಕ ಆರಂಭಿಸಲಿದೆ ಎಂದರು.‘ಆರ್‌ಐಎನ್‌ಎಲ್’- ವಿಶಾಖಪಟ್ಟಣ ಉಕ್ಕು ಸ್ಥಾವರವು  (ವಿಎಸ್‌ಪಿ) ವಾರ್ಷಿಕ 3 ದಶಲಕ್ಷ ಟನ್‌ಗಳಷ್ಟು ದ್ರವರೂಪದ ಉಕ್ಕು ತಯಾರಿಸುತ್ತಿದ್ದು,    11,500 ಕೋಟಿಗಳಷ್ಟು ವಹಿವಾಟು ನಡೆಸುತ್ತಿದೆ. ಈಗಿನ ತಯಾರಿಕಾ   ಸಾಮರ್ಥ್ಯವನ್ನು 6.3 ದಶಲಕ್ಷ ಟನ್ (ಎಂಟಿಪಿಎ)ಗಳಿಗೆ ಹೆಚ್ಚಿಸಲು ಉದ್ದೇಶಿಸಿದ್ದು, ಇದಕ್ಕಾಗಿ  12,500 ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.ರಾಷ್ಟ್ರೀಯ ಉಕ್ಕು ನೀತಿ ಅನ್ವಯ, ‘ವೈಜಾಗ್ ಉಕ್ಕು’ ಉತ್ಪನ್ನಗಳು ಸುಲಭವಾಗಿ ದೊರೆಯಲು ಗ್ರಾಮೀಣ ಡೀಲರ್‌ಶಿಪ್ ಯೋಜನೆ ಜಾರಿಗೊಳಿಸಲಾಗಿದೆ. ವಿತರಕರು ಭದ್ರತಾ ಠೇವಣಿ ಇರಿಸುವ ಅಗತ್ಯವಿಲ್ಲ, ಹೆಚ್ಚಿನ ಯುವ ಉದ್ಯಮಿಗಳು ವಿತರಕರಾಗಲು ಮುಂದೆ ಬರಬೇಕು   ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry