ಗುರುವಾರ , ನವೆಂಬರ್ 21, 2019
23 °C

ಆರ್‌ಐಎಲ್: ರೂ 5,589 ಕೋಟಿ ಲಾಭ

Published:
Updated:

ನವದೆಹಲಿ (ಪಿಟಿಐ): 2012-13ನೇ ಸಾಲಿನ ನಾಲ್ಕನೆಯ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್)ರೂ5,589 ಕೋಟಿ ನಿವ್ವಳ ಲಾಭ ಗಳಿಸಿದ್ದು ಶೇ 32ರಷ್ಟು ಏರಿಕೆ ದಾಖಲಿಸಿದೆ. ಕಳೆದ ಮೂರು ವರ್ಷಗಳಲ್ಲಿ `ಆರ್‌ಐಎಲ್' ಗಳಿಸಿರುವ ಗರಿಷ್ಠ ತ್ರೈಮಾಸಿಕ ಲಾಭ ಇದಾಗಿದೆ.ನೈಸರ್ಗಿಕ ಅನಿಲ ಉತ್ಪಾದನೆ ಇಳಿಕೆ ಕಂಡರೂ, ತೈಲ ಶುದ್ಧೀಕರಣ ವಹಿವಾಟು ಹೆಚ್ಚಿರುವುದರಿಂದ ಒಟ್ಟಾರೆ ಲಾಭಾಂಶ ಹೆಚ್ಚಿದೆ. ನಾಲ್ಕು ತ್ರೈಮಾಸಿಕಗಳ ನಿರಂತರ ಕುಸಿತದ ನಂತರ ಈ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ ಎಂದು `ಆರ್‌ಐಎಲ್' ಅಧ್ಯಕ್ಷ ಮುಕೇಶ್ ಅಂಬಾನಿ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)