`ಆರ್‌ಐಎಲ್' ಲಾಭ ರೂ 5,352 ಕೋಟಿ

ಮಂಗಳವಾರ, ಜೂಲೈ 16, 2019
25 °C

`ಆರ್‌ಐಎಲ್' ಲಾಭ ರೂ 5,352 ಕೋಟಿ

Published:
Updated:

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ(ಏಪ್ರಿಲ್-ಜೂನ್) ರಿಲಯನ್ಸ್ ಇಂಡಸ್ಟ್ರೀಸ್ ಲಿ.(ಆರ್‌ಐಎಲ್) ರೂ5,352 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ 19ರಷ್ಟು ಪ್ರಗತಿ ದಾಖಲಾಗಿದೆ.ತೈಲ ಶುದ್ಧೀಕರಣ ಮತ್ತು ಪೆಟ್ರೊಕೆಮಿಕಲ್ಸ್ ಕ್ಷೇತ್ರದ ಗಣನೀಯ ಮಾರಾಟ ಪ್ರಗತಿಯಿಂದ ಉತ್ತಮ ಫಲಿತಾಂಶ ಬಂದಿದೆ. ಇದರಿಂದ ಪ್ರತಿ ಷೇರಿನ ಸರಾಸರಿ ಮೌಲ್ಯ 16.6ರಷ್ಟು ಹೆಚ್ಚಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.2012-13ನೇ ಸಾಲಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪೆನಿ ರೂ4,503 ಕೋಟಿ ನಿವ್ವಳ ಲಾಭ ದಾಖಲಿಸಿತ್ತು.`ಆರ್‌ಐಎಲ್' ಘಟಕವೊಂದು ಗುಜರಾತ್‌ನ ಜಾಮ್‌ನಗರ್‌ನಲ್ಲಿದೆ. ಇದು ಪ್ರಪಂಚದ ಅತಿದೊಡ್ಡ ತೈಲ ಶುದ್ಧೀಕರಣ ಘಟಕಗಳಲ್ಲಿ ಒಂದು. ಮೊದಲ ತ್ರೈಮಾಸಿಕದಲ್ಲಿ ಈ ಘಟಕದಿಂದ ಬರುವ ವರಮಾನ ಶೇ 84ರಷ್ಟು ಹೆಚ್ಚಿದೆ. ಪೆಟ್ರೊರಾಸಾಯನಿಕ ಉತ್ಪನ್ನಗಳ ಮಾರಾಟದಿಂದ ಬರುವ ಚಿಲ್ಲರೆ ವರಮಾನವೂ ಶೇ 53ರಷ್ಟು ಪ್ರಗತಿ ಕಂಡಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಕಂಪೆನಿಯು ಪ್ರತಿ ಬ್ಯಾರಲ್ ತೈಲಕ್ಕೆ 8.4 ಡಾಲರ್‌ನಂತೆ (ರೂ495) ಲಾಭ ಗಳಿಸಿದೆ.ಹೂಡಿಕೆ ಮತ್ತು ಮಾರುಕಟ್ಟೆ ವಿಸ್ತರಣೆ

`ಮೊದಲ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಬಂದಿರುವುದು, ಹೂಡಿಕೆ ಮತ್ತು ಮಾರುಕಟ್ಟೆ ವಿಸ್ತರಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ' ಎಂದು ಕಂಪೆನಿ ಅಧ್ಯಕ್ಷ ಮುಖೇಶ್ ಅಂಬಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.`ಆರ್‌ಐಎಲ್' ಹೊಸ ಯೋಜನೆಗಳಿಗೆ ರೂ1.5 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದೆ.ಉತ್ತಮ ಫಲಿತಾಂಶ ದಾಖಲಿಸಿದ ಹಿನ್ನೆಲೆಯಲ್ಲಿ `ಆರ್‌ಐಎಲ್' ಷೇರು ಮೌಲ್ಯ ಶುಕ್ರವಾರ ಮುಂಬೈ ಷೇರುಪೇಟೆಯಲ್ಲಿ 6 ತಿಂಗಳ ಗರಿಷ್ಠ ಮಟ್ಟವಾದ ರೂ923.15ಕ್ಕೆ ಏರಿಕೆ ಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry