ಆರ್‌ಟಿಇ: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

7

ಆರ್‌ಟಿಇ: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

Published:
Updated:
ಆರ್‌ಟಿಇ: ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2014–15ನೇ ಸಾಲಿನಲ್ಲಿ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ವಿತರಿಸುವ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿತು.ಶೇ 25 ಮೀಸಲಾತಿಯಡಿ ಈ ಸಲ ರಾಜ್ಯದಾದ್ಯಂತ 1,08,344 ಸೀಟುಗಳು ಲಭ್ಯ ಇವೆ. ಅರ್ಜಿ ವಿತರಿಸುವ ಪ್ರಕ್ರಿಯೆ ಫೆ. 7ರ ವರೆಗೆ ಮುಂದುವರಿಯಲಿದೆ.ನಗರದ ಬಹುತೇಕ ಶಾಲೆಗಳಲ್ಲಿ ಮೊದಲ ದಿನ ಅರ್ಜಿ ವಿತರಿಸುವ ಪ್ರಕ್ರಿಯೆ ಗೊಂದಲದಿಂದ ಕೂಡಿತ್ತು. ಆರ್‌ಟಿಇ ಅಡಿಯಲ್ಲಿ ಶಾಲೆಗಳಲ್ಲಿ ಲಭ್ಯ ಇರುವ ಸೀಟುಗಳ ಸಂಖ್ಯೆ­ಯನ್ನು ಆಡಳಿತ ಮಂಡಳಿಗಳು ಪ್ರಕಟಿ­ಸಿಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಅನೇಕ ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.ರಾಜಾಜಿನಗರ ಕ್ಷೇತ್ರ ಶಿಕ್ಷಣಾಧಿ­ಕಾರಿ ಕಚೇರಿಯಲ್ಲಿ ದೂರು ಸಲ್ಲಿ­ಸಲು ಬಂದ ಹಿರಿಯ ನಾಗರಿಕ­ರೊ­ಬ್ಬರು ಖಾಸಗಿ ಶಾಲೆಗಳ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry