ಆರ್‌ಟಿಇ: `ಪೋಷಕರಿಗೆ ಮಾಹಿತಿ' ಕೈಪಿಡಿ

7

ಆರ್‌ಟಿಇ: `ಪೋಷಕರಿಗೆ ಮಾಹಿತಿ' ಕೈಪಿಡಿ

Published:
Updated:

ಬೆಂಗಳೂರು: `ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು' ಕಾಯ್ದೆಯಡಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳು ಸಮಸ್ಯೆ ಇಲ್ಲದೆ ಶಾಲೆಗಳಿಗೆ ಸೇರ್ಪಡೆಯಾಗಲು ನೆರ ವಾಗುವ ನಿಟ್ಟಿನಲ್ಲಿ ಆರ್‌ಟಿಇ ಕಾರ್ಯ ಪಡೆಯು `ಪೋಷಕರಿಗೆ ಮಾಹಿತಿ' ಕೈಪಿಡಿ ಯನ್ನು ನಗರದಲ್ಲಿ ಭಾನುವಾರ ಬಿಡುಗಡೆ ಮಾಡಿತು.ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ.ರಾವ್ ಮಾತನಾಡಿ, `2013-14ನೇ ಶೈಕ್ಷಣಿಕ ವರ್ಷದಲ್ಲಿ ಕಾಯ್ದೆಯಡಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಜನವರಿ 5ರಿಂದ ಆರಂಭ ಗೊಳ್ಳಲಿದೆ. ಶಿಕ್ಷಣ ಇಲಾಖೆ ಮಾರ್ಗ ಸೂಚಿಗಳನ್ನು ಪ್ರಕಟಿಸಿ ಪೋಷಕರ ಗೊಂದಲ ದೂರ ಮಾಡಲು ಪ್ರಯತ್ನಿದೆ. ಆದರೂ, ಪೋಷಕರಲ್ಲಿ ಹತ್ತು ಹಲವು ಗೊಂದಲಗಳು ಉಳಿದುಕೊಂಡಿವೆ. ಈ ನಿಟ್ಟಿನಲ್ಲಿ ಪೋಷಕರಿಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ' ಎಂದರು.`ಕಳೆದ ವರ್ಷ ಗಡಿಬಿಡಿಯಲ್ಲಿ ಕಾಯ್ದೆ ಅನುಷ್ಠಾನ ಮಾಡಿದ್ದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕಿರಲಿಲ್ಲ. ಕೆಲವು ಪೋಷಕರು ಈ ವರ್ಷವಾದರೂ ತಮ್ಮ ಮಕ್ಕಳನ್ನು ಆರ್‌ಟಿಇ ಅಡಿಯಲ್ಲೇ ದಾಖಲಾತಿ ಮಾಡಿಸಬೇಕು ಎಂದು ಕಾದು ಕುಳಿತಿದ್ದಾರೆ. ಕಾಯ್ದೆ ಪ್ರಕಾರ ಇದಕ್ಕೆ ಅವಕಾಶ ಇಲ್ಲ. ಈ ಮಕ್ಕಳಿಗೆ ಪ್ರವೇಶ ದೊರಕಲು ನೆರವಾಗುವ ನಿಟ್ಟಿನಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸ ಲಾಗುವುದು' ಎಂದರು.`ಪೋಷಕರಿಗೆ ಸುಲಭದಲ್ಲಿ ಮಾಹಿತಿ ದೊರಕಲು ಕೈಪಿಡಿಯನ್ನು ಶಾಲೆಗಳಿಗೆ, ಸ್ವಯಂಸೇವಾ ಸಂಘಟನೆಗಳಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಾಲಾಭಿ ವೃದ್ಧಿ ಸಮಿತಿಗಳಿಗೆ ನೀಡಲಾಗುವುದು. ಪೋಷಕರ ಗೊಂದಲವನ್ನು ದೂರ ಮಾಡಲು ಶಿಕ್ಷಣ ಇಲಾಖೆ ಸಹಾಯ ವಾಣಿಯನ್ನು ಆರಂಭಿಸಬೇಕು' ಎಂದು ಅವರು ಆಗ್ರಹಿಸಿದರು.ಕೈಪಿಡಿ ಬಿಡುಗಡೆ ಮಾಡಿದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿಪ್ರಸಾದ್ ಮಾತನಾಡಿ, `ಖಾಸಗಿ ಶಾಲೆಗಳು ಹಿಂದು ಳಿದ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡಬೇಕು.ದಾಖಲಾತಿ ನಿರಾಕರಿಸುವುದು ಅವರ ಹಕ್ಕನ್ನು ಕಸಿದುಕೊಂಡಂತೆ. ಕಾಯ್ದೆ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಪೋಷಕರಿಗೆ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಮಾಹಿತಿ ನೀಡಬೇಕು' ಎಂದರು.ಪೋಷಕರ ವಲಸೆ

2012-13ನೇ ಸಾಲಿನ ಶೈಕ್ಷಣಿಕ ವರ್ಷ ಆರ್‌ಟಿಇ ಅಡಿಯಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಅವಕಾಶ ದೊರಕದ ಹಿನ್ನೆಲೆಯಲ್ಲಿ ನಗರದ ಇಬ್ಬರು ಪೋಷಕರು ಶಾಲೆ ಸಮೀಪಕ್ಕೆ ವಲಸೆ ಹೋಗಿದ್ದಾರೆ.

ಸಮಾರಂಭದಲ್ಲಿ ಈ ವಿಷಯವನ್ನು ನಾಗಸಿಂಗ ರಾವ್ ಬಹಿರಂಗ ಪಡಿಸಿದರು. `ಯಲಹಂಕ ಉಪ ನಗರದ ಕುಮಾರ್ ಎಂಬವರು ಹೆಬ್ಬಾಳಕ್ಕೆ, ಹನುಮಂತನಗರದ ವಾಸುದೇವಾಚಾರಿ ಎಂಬವರು ಗಾಂಧಿಬಜಾರ್‌ನ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಮನೆ ಸಮೀಪದಲ್ಲಿ ಶಾಲೆ ಇಲ್ಲದ ಕಾರಣ ಈ ಪೋಷಕರ ಮಕ್ಕಳಿಗೆ ಆರ್‌ಟಿಇ ಅಡಿಯಲ್ಲಿ ಪ್ರವೇಶಾವಕಾಶ ಸಿಕ್ಕಿರ ಲಿಲ್ಲ. ಉಳಿದ ಮಕ್ಕಳಿಗೂ ಈ ರೀತಿ ಸಮಸ್ಯೆ ಆಗುವುದು ಬೇಡ ಎಂಬ ಕಾರಣಕ್ಕೆ ವಲಸೆ ಹೋಗಿದ್ದಾರೆ' ಎಂದು ಅವರು ತಿಳಿಸಿದರು.ಅಧಿಕಾರಿಗಳ ದೂರವಾಣಿ ಸಂಖ್ಯೆಗಳು

ಪೋಷಕರ ಸಂದೇಹ ನಿವಾರಣೆಗೆ ಅಧಿಕಾರಿಗಳ ಸಂಖ್ಯೆ...

ಡಿಡಿಪಿಐ: ಬೆಂಗಳೂರು ಉತ್ತರ ಜಿಲ್ಲೆ - 9448999326

ದಕ್ಷಿಣ ಜಿಲ್ಲೆ -9448999327

ಗ್ರಾಮಾಂತರ ಜಿಲ್ಲೆ -9448999325

ಬೆಂಗಳೂರು ಉತ್ತರ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು:

ಉತ್ತರ 1 -9480695020

ಉತ್ತರ 2 -9480695021

ಉತ್ತರ 3 -9480695022

ಉತ್ತರ 4 -9480695023

ಬೆಂಗಳೂರು ದಕ್ಷಿಣ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು:

ಆನೇಕಲ್:  9480695024

ದಕ್ಷಿಣ 1 -9480695025

ದಕ್ಷಿಣ 2 -9480695026

ದಕ್ಷಿಣ 3 -9480695027

ದಕ್ಷಿಣ 4 -9480695028

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು:

ದೇವನಹಳ್ಳಿ -9480695012

ದೊಡ್ಡಬಳ್ಳಾಪುರ -9480695013

ಹೊಸಕೋಟೆ -9480695014

ನೆಲಮಂಗಲ -9480695015ಪೋಷಕರಿಗೆ ಮಾಹಿತಿ

- ಪೋಷಕರ ಆದಾಯ ವರ್ಷಕ್ಕೆ 3.50 ಲಕ್ಷಕ್ಕಿಂತಲೂ ಕಡಿಮೆ ಇರಬೇಕು.

- ಪೋಷಕರು ಮನೆಗೆ ಒಂದು ಕಿ.ಮೀ. ಅಂತರದಲ್ಲಿರುವ ಅನುದಾನಿತ, ಅನುದಾನರಹಿತ ಶಾಲೆಗಳ ಪಟ್ಟಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು.

- ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಪೋಷಕರು ಇಟ್ಟುಕೊಳ್ಳುವುದು ಉತ್ತಮ. ಸ್ಥಳೀಯ ನೆಮ್ಮದಿ ಕೇಂದ್ರದ ವಿಳಾಸವನ್ನೂ ಇಟ್ಟುಕೊಳ್ಳಬೇಕು.

- ಶಿಕ್ಷಣ ಇಲಾಖೆಯ ವೆಬ್‌ಸೈಟ್ ಡಿಡಿಡಿ.ಠ್ಚಟಟ್ಝಛಿಛ್ಠ್ಚಠಿಜಿಟ್ಞ.ಚ್ಟ.್ಞಜ್ಚಿ.ಜ್ಞಿ ಅರ್ಜಿ ನಮೂನೆ ಲಭ್ಯ ಇದೆ.

- ನಗರದ ಕೆಲವು ಅನುದಾನರಹಿತ ಕಾಲೇಜುಗಳು ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭಿಸಿವೆ. ಈ ಬಗ್ಗೆ ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ. ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ ಪ್ರತಿಯೊಂದು ಅನುದಾನಿತ, ಅನುದಾನರಹಿತ ಶಾಲೆಗಳು ಶೇ 25ರಷ್ಟು ಮೀಸಲಾತಿಯನ್ನು ನೀಡಲೇಬೇಕು.

- `ನಿಮ್ಮ ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಸ್ಥಳಾವಕಾಶ ಮಾಡಿಕೊಡುತ್ತೇವೆ. ಹಣ ನೀಡಿ' ಎಂದು ಪುಸಲಾಯಿಸುವ ಮಧ್ಯವರ್ತಿಗಳ ಮೊರೆ ಹೋಗಬಾರದು. ಪೋಷಕರು ಸಂದೇಹಗಳಿಗೆ ಶಿಕ್ಷಣ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಥವಾ ಆರ್‌ಟಿಇ ಕಾರ್ಯಪಡೆಯನ್ನು ಸಂಪರ್ಕಿಸಬಹುದು.

- ಅನಾಥ ಮಕ್ಕಳು, ವಲಸೆ ಮಗು, ಬೀದಿಮಗು, ಅಂಗವಿಕಲ ಮಗು. ಎಚ್‌ಐವಿ ಪೀಡಿತ ಮಗು ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಪ್ರಮಾಣಪತ್ರ ಹೊಂದಿರಬೇಕು.

- ಮಗುವಿನ ಭಾವಚಿತ್ರ, ಮಗುವಿನ ಜನ್ಮ ದಾಖಲಾತಿ ಪತ್ರ, ಜಾತಿ ಮತ್ತು ಆದಾಯಪತ್ರವನ್ನು ಪೋಷಕರು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ಹಾಗೂ ವಾಸ ಸ್ಥಳದ ದಾಖಲೆಯೂ ಇರಬೇಕು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry