ಆರ್‌ಟಿಇ: ಪ್ರತಿ ವರ್ಷ ಲೆಕ್ಕಪತ್ರ ವರದಿ ಸಲ್ಲಿಕೆ ಕಡ್ಡಾಯ

7

ಆರ್‌ಟಿಇ: ಪ್ರತಿ ವರ್ಷ ಲೆಕ್ಕಪತ್ರ ವರದಿ ಸಲ್ಲಿಕೆ ಕಡ್ಡಾಯ

Published:
Updated:

ಬೆಂಗಳೂರು: ‘ಖಾಸಗಿ ಶಾಲೆಗಳ ಆಡ­ಳಿತ ಮಂಡಳಿಗಳು ಪ್ರತಿ ವರ್ಷ ಲೆಕ್ಕಪತ್ರ  (ಆಡಿಟ್‌) ವರದಿ ಸಲ್ಲಿಸುವುದು ಕಡ್ಡಾಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾ­ಖೆಯ ಆಯುಕ್ತ ಮೊಹಮ್ಮದ್‌ ಮೊಹಿಸಿನ್‌ ಅವರು ತಿಳಿಸಿದರು.ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌­ಟಿಇ) ಜಾರಿ ಸಂಬಂಧ ಇರುವ ಗೊಂದ­ಲಗಳ ನಿವಾ­ರಣೆಗಾಗಿ ಶುಕ್ರ­ವಾರ ನಡೆದ ಖಾಸಗಿ ಶಾಲೆ­ಗಳ ಆಡಳಿತ ಮಂಡಳಿಗಳ ಪ್ರಮುಖರ ಜತೆ ಸಭೆ ನಡೆಸಿ ಸುದ್ದಿಗಾರ­ರೊಂದಿಗೆ ಅವರು ಮಾತನಾಡಿದರು.‘ಲೆಕ್ಕಪತ್ರ ವರದಿಯನ್ನು 3 ವರ್ಷ­ಕ್ಕೊಮ್ಮೆ ಸಲ್ಲಿಸುವುದಾಗಿ ಖಾಸಗಿ ಶಾಲೆ­­ಗಳ ಆಡಳಿತ ಮಂಡಳಿಗಳ ಮುಖ್ಯ­ಸ್ಥರು ಹೇಳು­ತ್ತಿದ್ದಾರೆ. ಲೆಕ್ಕ­ಪತ್ರ ವರ­ದಿಯ ಆಧಾರದಲ್ಲೇ ಆರ್‌ಟಿಇ ಶುಲ್ಕ ಹಣ ಮರುಪಾವತಿ ಮಾಡುವು­ದರಿಂದ ಪ್ರತಿ­­­ವರ್ಷ ಲೆಕ್ಕಪತ್ರ ವರದಿ ಸಲ್ಲಿಸುವುದು ಕಡ್ಡಾಯ’ ಎಂದು ಸ್ಪಷ್ಟಪಡಿಸಿದರು.‘ಶೇ 75ಕ್ಕಿಂತ ಹೆಚ್ಚಿನ ಪೋಷಕರು ನಕಲಿ ವರಮಾನ ಪ್ರಮಾಣ ಪತ್ರ ಸಲ್ಲಿಸಿ ಆರ್‌ಟಿಇ ಅಡಿ ಪ್ರವೇಶ ಪಡೆ­ಯು­­ತ್ತಾರೆ ಎಂದು ಖಾಸಗಿ ಶಾಲೆಗಳ ಆಡ­­­­ಳಿತ ಮಂಡಳಿ ಮುಖ್ಯಸ್ಥರು ತಿಳಿಸಿದ್ದಾರೆ. ಇದನ್ನು ತಡೆಯಲು ಕ್ರಮ ಕೈಗೊ­ಳ್ಳು­ವಂತೆ ಜಿಲ್ಲಾಧಿ­ಕಾರಿಗಳು, ತಹ­­ಶೀ­ಲ್ದಾರ್‌­­ಗಳಿಗೆ ಪತ್ರ ಬರೆಯ­ಲಾಗಿದೆ. ಈ ಬಗ್ಗೆ ಸರಿ­ಯಾಗಿ ಮೇಲ್ವಿ­ಚಾ­­ರಣೆ ನಡೆಸುವಂತೆ ಎಲ್ಲ ಉಪ ನಿರ್ದೇ­­­ಶಕರಿಗೂ ಸುತ್ತೋಲೆ ಕಳಿಸ­ಲಾಗಿದೆ’ ಎಂದರು.‘2013–14ನೇ ಸಾಲಿನ ಆರ್‌ಟಿಇ ಶುಲ್ಕ ಹಣ ಮರುಪಾವತಿಗೆ ಕ್ರಮ ಕೈಗೊ­ಳ್ಳ­ಲಾಗಿದೆ. ಇದಕ್ಕಾಗಿ ₨ 45 ಕೋಟಿ ಈಗಾಗಲೇ ಬಿಡುಗಡೆ­ಯಾಗಿದೆ. ಇದೇ 20ರೊಳಗೆ ಶಾಲೆಗಳಿಗೆ ಈ ಹಣ ತಲುಪಿಸುವ ವ್ಯವಸ್ಥೆ ಮಾಡಲಾ­ಗುವುದು’ ಎಂದು ಹೇಳಿದರು.‘21 ಜಿಲ್ಲೆಗಳ ಆರ್‌ಟಿಇ ಕಾರ್ಯ­ಪಡೆಗಳಿಂದ ವರದಿ ಬಂದಿದೆ. ವರದಿ­ಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.ಸಂಪುಟದ ಇತರ ತೀರ್ಮಾನಗಳು

* ­ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ತಜ್ಞ ವೈದ್ಯ ಡಾ.ಟಿ.ವೆಂಕಟೇಶ್‌, ಸಂಡೂರು ತಾಲ್ಲೂಕು ಚೋರನೂರಿನ ವೈದ್ಯಾಧಿ­ಕಾರಿ ಡಾ.ಕೆ.ರಾಜಶೇಖರನ್‌ ಸೇವೆಯಿಂದ ವಜಾ

* ಕೃಷ್ಣಾಭಾಗ್ಯ ಜಲನಿಗಮ ಬಾಂಡ್‌ಗಳ ಮೂಲಕ ₨750 ಕೋಟಿ ಸಾಲ ಪಡೆಯುವುದಕ್ಕೆ ಸರ್ಕಾರದ ಘಟನೋತ್ತರ ಅನುಮೋದನೆ* ನಿವೃತ್ತ ಐಎಫ್‌ಎಸ್‌ ಅಧಿಕಾರಿ ಆರ್‌.ಎಂ.ಎನ್‌.­ಸಹಾಯ್‌ ಅವರನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಒಪ್ಪಿಗೆ* ಅಬಕಾರಿ ಮತ್ತು ಇತರೆ ಶುಲ್ಕಗಳನ್ನು ಆನ್‌ಲೈನ್‌ ಮೂಲಕ ಪಾವತಿಸಲು ಕರ್ನಾಟಕ ಅಬಕಾರಿ (ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ* ಹಾಸನದ ಕೃಷಿ ಕಾಲೇಜು ಕಟ್ಟಡ ಕಾಮಗಾರಿಗೆ ಹೆಚ್ಚುವರಿಯಾಗಿ ₨ 6.74 ಕೋಟಿ* ರಾಜ್ಯ ಪೊಲೀಸ್‌ ದೂರುಗಳ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ನಿವೃತ್ತ ಅಧೀನ ಕಾರ್ಯದರ್ಶಿ ಅರ್ಥರ್‌ ಹ್ಯಾರಿ ಗೊನ್ಸಾಲ್ವಿಸ್‌ ನೇಮಕ* ಗೋಕಾಕ್‌ನ ಡೋಹರ ಕಕ್ಕಯ್ಯ ಜ್ಞಾನಪೀಠದ ಆಟದ ಮೈದಾ­­ನ­ಕ್ಕಾಗಿ 1367.90 ಚ.ಮೀ ಜಾಗ.* ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ಉಜಿರೆಯಲ್ಲಿ 17.54 ಎಕರೆ ಜಮೀನು* ಹಾವೇರಿ ತಾಲ್ಲೂಕು ಗಂಜಿಗಟ್ಟಿ ಗ್ರಾಮದಲ್ಲಿ ಸಮು­ದಾಯ ಭವನ ನಿರ್ಮಾಣ ಮಾಡಲು ಕುರುಬರ ಸಂಘಕ್ಕೆ ಅರ್ಧ ಎಕರೆ ಜಮೀನು ಮಂಜೂರು* ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ­ಯಿಂದ ನಿರಾಶ್ರಿತರಾದ ಕುಟುಂಬಗಳಿಗೆ ಪುನರ್ವ­ಸತಿ ಕಲ್ಪಿ­ಸು­ವಾಗ ಮುದ್ರಾಂಕ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ.* ಕುಂದಾಪುರ ತಾಲ್ಲೂಕಿನ ಬೈಂದೂರು ಬಳಿ ಕೊಡೇರಿ­ಯಲ್ಲಿ ಮೀನುಗಾರಿಕೆ ಇಳಿದಾಣ ಕೇಂದ್ರದ ಅಳಿವೆಯ­ಲ್ಲಿ­ರುವ ಎರಡು ತಡೆಗೋಡೆಗಳನ್ನು 200 ಮೀಟರ್‌ನಿಂದ 400 ಮೀಟರ್‌ಗೆ ವಿಸ್ತರಿಸುವ ₨33 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಆಡಳಿತಾತ್ಮಕ ಒಪ್ಪಿಗೆ* ಶ್ರೀರಂಗಪಟ್ಟಣದ ನಾಗತಿಹಳ್ಳಿ ಬಳಿ ₨8.10 ಕೋಟಿ ವೆಚ್ಚದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಲು ಅನುಮತಿ* ಕೊಪ್ಪಳ ಬಳಿ ₨ 35 ಕೋಟಿ ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣ* ತುಮಕೂರು – ದಾವಣಗೆರೆ ಹಾಗೂ ತುಮಕೂರು – ರಾಯ­ದುರ್ಗ ರೈಲು ಮಾರ್ಗದಲ್ಲಿ ₨ 13.88 ಕೋಟಿ ವೆಚ್ಚದಲ್ಲಿ ಮೇಲುಸೇತುವೆ ನಿರ್ಮಿಸಲು ಒಪ್ಪಿಗೆ* ಸೋಲ್ಲಾಪುರ – ವಾಡಿ ಮಾರ್ಗದಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಸಮ್ಮತಿ* ಯಾದಗಿರಿಯಲ್ಲಿ ಆರಂಭವಾಗಲಿರುವ ರೈಲ್ವೆ ಬೋಗಿ ತಯಾ­ರಿಕೆ ಕಾರ್ಖಾನೆಗೆ 150 ಎಕರೆ ನೀಡಲು ಒಪ್ಪಿಗೆ.* ಪ್ರತಿ ಟನ್‌ಗೆ ₨ 1310 ದರದಲ್ಲಿ ಒಬ್ಬ ರೈತನಿಂದ ಗರಿಷ್ಠ 75 ಕ್ವಿಂಟಲ್‌ ಮೆಕ್ಕೆ ಜೋಳ ಖರೀದಿಸಲು ಒಪ್ಪಿಗೆ* ಉಪ ಖನಿಜಗಳ ಗಣಿಗಾರಿಕೆಯನ್ನು ಹರಾಜು ಹಾಕುವ ಬದಲು ಐದು ವರ್ಷಗಳ ಕಾಲ ಗುತ್ತಿಗೆಗೆ ನೀಡಲು ಸಮ್ಮತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry