ಶುಕ್ರವಾರ, ಜೂನ್ 25, 2021
29 °C

ಆರ್‌ಟಿಇ: ಶಿಕ್ಷಣ ಸಚಿವರಿಗೆ ಕುಸ್ಮಾ ಮತ್ತೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ­ಯಡಿ ಬಡ ವಿದ್ಯಾರ್ಥಿಗಳನ್ನು ಮೊದಲು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಆಗ್ರ­ಹಿಸಿ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು (ಕುಸ್ಮಾ) ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಗುರುವಾರ ಮತ್ತೊಂದು ಪತ್ರ ಬರೆದಿದೆ.‘ಆರ್‌ಟಿಇ ಅಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಮೊದಲು ಶೇ 25 ಮೀಸಲಾತಿ ನೀಡಿ. ಬಳಿಕ ಖಾಸಗಿ ಶಾಲೆಗಳಿಗೆ ಕಳುಹಿಸಿ’ ಎಂದು ಫೆ. 26ರಂದು ಕುಸ್ಮಾ ಪರ ಕಾನೂನು ಸಲಹೆಗಾರ ಕೆ.ವಿ.ಧನಂಜಯ ಅವರು ಶಿಕ್ಷಣ ಸಚಿ­­ವ­ರಿಗೆ ಪತ್ರ ಬರೆದಿದ್ದರು. ‘ಈ ಪತ್ರಕ್ಕೆ ಸಚಿ­ವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿ­ಕ್ರಿಯೆ­ ನೀಡಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.‘2014–15ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಈಗ ನಡೆಯುತ್ತಿದ್ದು, ಇದು ಕಾಗದಕ್ಕೆ ಸೀಮಿ­­ತ­ವಾಗಿದೆ. ಕುಸ್ಮಾ ಶಾಲೆಗಳಲ್ಲಿ ನಡೆಯುತ್ತಿ­ರುವ ಈಗಿನ ದಾಖಲಾತಿ ಪ್ರಕ್ರಿಯೆ ಅಂತಿಮ ಅಲ್ಲ ಎಂಬು­ದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ಪಷ್ಟಪ­ಡಿ­ಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.‘ನೆರೆಹೊರೆಯ ಸರ್ಕಾರಿ ಶಾಲೆಗಳಲ್ಲಿ ಸೀಟು­ಗಳು ಭರ್ತಿಯಾಗಿವೆಯೇ ಎಂಬುದನ್ನು ಗಮನಿಸ­ಲಾ­­ಗು­­ವುದು. ಸೀಟುಗಳು ಭರ್ತಿ­ಯಾ­­ಗದೆ ಇದ್ದಲ್ಲಿ ಕುಸ್ಮಾ ಶಾಲೆಗಳಿಗೆ ದಾಖ­ಲಾದ ಆರ್‌­ಟಿಇ ಮಕ್ಕಳನ್ನು ಸರ್ಕಾರಿ ಶಾಲೆ­ಗ­ಳಿಗೇ ಮರಳಿ ಕಳು­ಹಿ­ಸಲಾಗುವುದು’ ಎಂದು ಎಚ್ಚರಿಸಿದ್ದಾರೆ.ವಾರದ ಗಡುವು

ಆರ್‌ಟಿಒ ಪ್ರಕ್ರಿಯೆಗೆ ಕುಸ್ಮಾ ಶಾಲೆಗಳು ಅಗತ್ಯ ಸಹಕಾರ ನೀಡುತ್ತಿವೆ. ಈ ಹಿಂದೆ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮ­ಸ್ಯೆ­ಗಳ ಬಗ್ಗೆ ಸರ್ಕಾರಕ್ಕೆ ಹತ್ತಾರು ಪತ್ರ ಬರೆ­ಯ­­ಲಾಗಿತ್ತು. ಸರ್ಕಾರ ಉತ್ತರವನ್ನೂ ನೀಡಿತ್ತು. ಆದರೆ, ಈ ಸಲ ಉತ್ತರವನ್ನೇ ನೀಡಿಲ್ಲ. ಉತ್ತರಕ್ಕಾಗಿ ಒಂದು ವಾರ ಕಾಯ­ಲಾ­­ಗುವುದು. ಪ್ರತಿಕ್ರಿಯೆ ಬಾರದೆ ಇದ್ದಲ್ಲಿ ಮಕ್ಕಳ ದಾಖಲಾತಿ ಮಾಡಿಕೊ­ಳ್ಳುವುದಿಲ್ಲ. ಸರ್ಕಾರ ಕ್ರಮ ಕೈಗೊಂಡರೆ ನ್ಯಾಯಾ­ಲ­ಯದ ಮೊರೆ ಹೋಗುತ್ತೇವೆ.

–ಕೆ.ವಿ.ಧನಂಜಯ, ಕುಸ್ಮಾ ವಕೀಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.