ಆರ್‌ಟಿಇ: ಶುಲ್ಕ ಮರು ಪಾವತಿಗೆ ಹಣ ಬಿಡುಗಡೆ

7

ಆರ್‌ಟಿಇ: ಶುಲ್ಕ ಮರು ಪಾವತಿಗೆ ಹಣ ಬಿಡುಗಡೆ

Published:
Updated:

ಬೆಂಗಳೂರು: ಉಚಿತ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ದಾಖಲಾದ ಶೇ 25ರಷ್ಟು ಮಕ್ಕಳ ಶಿಕ್ಷಣದ ವೆಚ್ಚವನ್ನು ಖಾಸಗಿ ಶಾಲೆಗಳಿಗೆ ಮರು ಪಾವತಿಸುವ ಸಂಬಂಧ ಸರ್ಕಾರ ಮೊದಲ ಕಂತಿನಲ್ಲಿ 29.46 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.ಪ್ರಸಕ್ತ ಸಾಲಿನಲ್ಲಿ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಒಟ್ಟು 49,736 ಮಕ್ಕಳು ಸೇರ್ಪಡೆಯಾಗಿದ್ದಾರೆ (ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ). ಪ್ರತಿ ಮಗುವಿಗೆ ವಾರ್ಷಿಕ 11,848 ರೂಪಾಯಿ ಪ್ರಕಾರ ಒಟ್ಟು 58,92,72,128 ರೂಪಾಯಿ ಮರು ಪಾವತಿ ಮಾಡಬೇಕಾಗುತ್ತದೆ.ಸದ್ಯ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ಉಳಿದ ಹಣವನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು. ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಲಭ್ಯವಾಗಿರುವ ಅನುದಾನವನ್ನು ಶುಲ್ಕ ಮರು ಪಾವತಿಗೆ ಬಳಸಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry