ಆರ್‌ಟಿಐ ಕಾಯ್ದೆ ವ್ಯಾಪ್ತಿಗೆ ಮೈಸೂರು ರೇಸ್‌ ಕ್ಲಬ್‌

7

ಆರ್‌ಟಿಐ ಕಾಯ್ದೆ ವ್ಯಾಪ್ತಿಗೆ ಮೈಸೂರು ರೇಸ್‌ ಕ್ಲಬ್‌

Published:
Updated:

ಬೆಂಗಳೂರು: ಮೈಸೂರು ರೇಸ್‌ ಕ್ಲಬ್‌ ಲಿಮಿಟೆಡ್‌ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಇ) ಅಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಆದೇಶಿಸಿರುವ ರಾಜ್ಯ ಮಾಹಿತಿ ಆಯೋಗ, ‘ಸಂಸ್ಥೆಯು ಇನ್ನು 90 ದಿನಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು (ಪಿಐಒ) ನೇಮಕ ಮಾಡಬೇಕು' ಎಂದು ಆದೇಶ ನೀಡಿದೆ.ಬೆಂಗಳೂರಿನ ಎಸ್‌. ಉಮಾಪತಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎಂ.ಆರ್‌. ಪೂಜಾರ ಅವರು, ‘ಮೈಸೂರು ರೇಸ್‌ ಕ್ಲಬ್‌, ಸಾರ್ವಜನಿಕ ಪ್ರಾಧಿಕಾರ ಆಗಿರುತ್ತದೆ. ಇದು ಸರ್ಕಾರದಿಂದ ಹಣಕಾಸಿನ ನೆರವನ್ನೂ ಪಡೆಯುತ್ತಿದೆ’ ಎಂದು ಸೋಮವಾರ ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.‘ಕ್ಲಬ್‌ 67 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇದು ಲೋಕೋಪಯೋಗಿ ಇಲಾಖೆಯ ಆಡಳಿತಲ್ಲಿ ಒಳಪಟ್ಟಿದೆ. 1996ರಲ್ಲಿ ಈ ಜಾಗವನ್ನು ಇಲಾಖೆಯು ಕ್ಲಬ್‌ಗೆ ಗುತ್ತಿಗೆ ಆಧಾರದಲ್ಲಿ 10 ವರ್ಷಗಳ ಅವಧಿಗೆ ನೀಡಿತ್ತು.ಅವಧಿ ಕೊನೆಗೊಂಡರೂ ಅದನ್ನು ವಿಸ್ತರಿಸಿಲ್ಲ ಅರ್ಜಿಯಲ್ಲಿ ವಾದಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry