ಆರ್‌ಟಿಒ ಕಚೇರಿಗಳಿಗೆ ಶೀಘ್ರ ಸ್ವಂತ ಕಟ್ಟಡ-ರಾಮಲಿಂಗಾರೆಡ್ಡಿ

ಮಂಗಳವಾರ, ಜೂಲೈ 23, 2019
24 °C

ಆರ್‌ಟಿಒ ಕಚೇರಿಗಳಿಗೆ ಶೀಘ್ರ ಸ್ವಂತ ಕಟ್ಟಡ-ರಾಮಲಿಂಗಾರೆಡ್ಡಿ

Published:
Updated:

ಬೆಂಗಳೂರು: `ಕೋರಮಂಗಲ, ಯಲಹಂಕ ಹಾಗೂ ನೆಲಮಂಗಲದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಕಟ್ಟಡಗಳ ನಿರ್ಮಾಣ ಕಾಮಗಾರಿ  ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ನಗರದ ದೇವರಚಿಕ್ಕನಹಳ್ಳಿಯಲ್ಲಿ ರೂ 5.8 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ನಗರ ವ್ಯಾಪ್ತಿಯಲ್ಲಿ ಒಟ್ಟು 10 ಪ್ರಾದೇಶಿಕ ಸಾರಿಗೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಬಹುತೇಕ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲ. ಖಾಸಗಿ ಕಟ್ಟಡದ ಮಾಲೀಕರು ಕಚೇರಿ ಕಟ್ಟಡಗಳ ಬಾಡಿಗೆ ಹೆಚ್ಚಿಸುತ್ತಿರುವ ಕಾರಣ, ಸರ್ಕಾರಿ ಜಾಗ ಗುರುತಿಸಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ' ಎಂದು ಹೇಳಿದರು.ನಂತರ ಅವರು ಮಕ್ಕಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಿ.ಡಿ ಗಳನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಸಾರಿಗೆ ಆಯುಕ್ತ ಕೆ.ಆರ್.ಶ್ರೀನಿವಾಸ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry