ಆರ್‌ಟಿಪಿಎಸ್ ಅಗ್ನಿ ಆಕಸ್ಮಿಕ ಘಟನೆ ಐವರ ವಿರುದ್ಧ ಪ್ರಕರಣ ದಾಖಲು

7

ಆರ್‌ಟಿಪಿಎಸ್ ಅಗ್ನಿ ಆಕಸ್ಮಿಕ ಘಟನೆ ಐವರ ವಿರುದ್ಧ ಪ್ರಕರಣ ದಾಖಲು

Published:
Updated:
ಆರ್‌ಟಿಪಿಎಸ್ ಅಗ್ನಿ ಆಕಸ್ಮಿಕ ಘಟನೆ ಐವರ ವಿರುದ್ಧ ಪ್ರಕರಣ ದಾಖಲು

ರಾಯಚೂರು:  ಆರ್‌ಟಿಪಿಎಸ್‌ನ ಎರಡನೇ ಘಟಕದ ಬಾಯ್ಲರ್ ವಿಭಾಗದಲ್ಲಿ ಅಗ್ನಿ ಆಕಸ್ಮಿಕಕ್ಕೆ ಸಂಬಂಧಿಸಿದಂತೆ ಆರ್‌ಟಿಪಿಎಸ್‌ನ ನಾಲ್ವರು ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರ ಸೇರಿ ಐದು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎರಡನೇ ಘಟಕದ ಸುರಕ್ಷಾ  ಎಂಜಿನಿಯರ್ ವೀರಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆನಂದಕುಮಾರ, ಕಿರಿಯ ಎಂಜಿನಿಯರ್ ಕಾಶೀನಾಥ್ ಹಾಗೂ ಗುತ್ತಿಗೆದಾರ ಜಾಕೀರ್ ವಿರುದ್ಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರಕ್ಷತಾ ಕ್ರಮ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯದ ಬಗ್ಗೆ ಗಾಯಾಳುಗಳು ನೀಡಿದ ಮಾಹಿತಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಗಾಯಾಳುಗಳು, ಸಂಬಂಧಪಟ್ಟ ನೌಕರರು, ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ.

ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry