ಆರ್‌ಟಿಪಿಎಸ್: ವಿದ್ಯುತ್ ಉತ್ಪಾದನೆ 100 ಮೆ.ವಾ ಹೆಚ್ಚಳ

7

ಆರ್‌ಟಿಪಿಎಸ್: ವಿದ್ಯುತ್ ಉತ್ಪಾದನೆ 100 ಮೆ.ವಾ ಹೆಚ್ಚಳ

Published:
Updated:

ರಾಯಚೂರು:  ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಐದು ಘಟಕಗಳಿಂದ ಗುರುವಾರ 900 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗಿದೆ. ಎರಡು ದಿನಗಳ ಹಿಂದೆ ನಾಲ್ಕು ಘಟಕಗಳಿಂದ 800 ಮೆವಾ ವಿದ್ಯುತ್ ಉತ್ಪಾದಿಸಿದ್ದು ಇಂದು ಹೆಚ್ಚುವರಿಯಾಗಿ 100 ಮೆವಾ ಉತ್ಪಾದಿಸಲಾಗಿದೆ.

1, 3 ಹಾಗೂ 8ನೇ ಘಟಕ ಸ್ಥಗಿತಗೊಂಡಿವೆ. 2, 4, 5, 6 ಮತ್ತು 7ನೇ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ. ಕಲ್ಲಿದ್ದಲು ಸಂಗ್ರಹಾಗಾರದಲ್ಲಿ 1.27 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್‌ನಿಂದ 1 ರೇಕ್ (3,500 ಮೆಟ್ರಿಕ್ ಟನ್) ಗುರುವಾರ ರಾತ್ರಿ ಸರಬರಾಜು ಆಗುವ ನಿರೀಕ್ಷೆ ಇದೆ ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ `ಪ್ರಜಾವಾಣಿ~ ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry