ಆರ್‌ಬಿಐ ಖಾತೆಗೂ ಕನ್ನ!

7

ಆರ್‌ಬಿಐ ಖಾತೆಗೂ ಕನ್ನ!

Published:
Updated:
ಆರ್‌ಬಿಐ ಖಾತೆಗೂ ಕನ್ನ!

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ವೆಬ್ ಸೈಟ್‌ಗೂ ಹ್ಯಾಕರ್ಸ್ ದಾಳಿ ನಡೆಸಲು ಯತ್ನಿಸಿರುವುದು ಕಳೆದ ವಾರ ಬೆಳಕಿಗೆ ಬಂದಿದೆ. ಆಗ ಒಂದಿಡೀ ದಿನ ವೆಬ್ ಪುಟ ಸ್ಥಗತಿಗೊಂಡಿತ್ತು. ಏಕೈಕ ಐ.ಪಿ ವಿಳಾಸದ ಮೂಲಕ (ಸಿಂಗಲ್ ಇಂಟರ್‌ನೆಟ್ ಪ್ರೊಟೊಕಾಲ್) ಆ ಹ್ಯಾಕರ್‌ಹಲವು ಬಾರಿ ಡೊಮೈನ್ ನೇಮ್ ಸಿಸ್ಟಂ ಮೇಲೆ (ಡಿಎನ್‌ಎಸ್) ದಾಳಿ ನಡೆಸಿದ್ದಾನೆ.ಈಗ ಈ ಐ.ಪಿ ವಿಳಾಸದ ಮೇಲೆ ನಿಷೇಧ ಹೇರಲಾಗಿದೆ. ಈ ದಾಳಿಯಲ್ಲಿ ಯಾವುದೇ ಮಹತ್ವದ ಮಾಹಿತಿ-ದತ್ತಾಂಶ ಕಳುವಾಗಿಲ್ಲ ಎಂದು `ಆರ್‌ಬಿಐ~ ವಕ್ತಾರ ಸ್ಪಷ್ಟಪಡಿಸಿದ್ದಾರೆ.

ಹ್ಯಾಕರ್ ದಾಳಿ ಮಾಡಿರುವ ಐ.ಪಿ ವಿಳಾಸ ತಿಳಿದುಬಂದಿದ್ದರೂ, ಈ ದಾಳಿ ಯಾವ ಭೌಗೋಳಿಕ ಪ್ರದೇಶದಿಂದ ನಡೆದಿದೆ ಎನ್ನುವುದನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.  ಈ ಕುರಿತು `ಆರ್‌ಬಿಐ~ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಮುಂಬೈ ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry