`ಆರ್‌ಬಿಐ ಗ್ರಾಹಕರಿಗೆ ಯೋಜನೆ'

7

`ಆರ್‌ಬಿಐ ಗ್ರಾಹಕರಿಗೆ ಯೋಜನೆ'

Published:
Updated:

ಚಾಮರಾಜನಗರ: `ಸಾರ್ವಜನಿಕರ ಅನುಕೂಲತೆಗಾಗಿ ಹಲವು ಸುಧಾರಣೆಗಳನ್ನು ತರುವ ಮೂಲಕ ಜನ ಸಾಮಾನ್ಯರ ಬಳಿಗೆ ಹೋಗಲು ಬ್ಯಾಂಕಿಂಗ್ ಕ್ಷೇತ್ರ ಯತ್ನಿಸುತ್ತಿದೆ' ಎಂದು ಆರ್‌ಬಿಐನ ಓಂಬುಡ್ಸಮನ್ ಅಧಿಕಾರಿ ಪಳನಿಸ್ವಾಮಿ ಹೇಳಿದರು.ನಗರದ ವಾಸವಿಮಹಲ್‌ನಲ್ಲಿ ಲೀಡ್ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್‌ನಿಂದ ಈಚೆಗೆ ಏರ್ಪಡಿಸಿದ್ದ ಬ್ಯಾಂಕಿಂಗ್ ಲೋಕಪಾಲ ವ್ಯವಸ್ಥೆಯಾದ ಓಂಬುಡ್ಸ್‌ಮನ್ ಅರಿವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಆರ್‌ಬಿಐ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲ. ಅದು ಕೈಗೆಟುಕದ ಬ್ಯಾಂಕ್ ಎಂದು ತಿಳಿದಿದ್ದಾರೆ. ಹೀಗಾಗಿ ಜನ ಸಾಮಾನ್ಯರ ಬಳಿಗೆ ತೆರಳುವುದಕ್ಕಾಗಿ ಆರ್‌ಬಿಐ 2006ರಲ್ಲಿ ಬ್ಯಾಂಕಿಂಗ್ ಲೋಕಪಾಲ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ದೇಶದ ವಾಣಿಜ್ಯ ಹಾಗೂ ಇನ್ನಿತರ ಬ್ಯಾಂಕ್‌ನಿಂದ ಗ್ರಾಹಕರಿಗೆ ಆಗುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಓಂಬುಡ್ಸಮನ್ ಕಾರ್ಯರ್ನಿಹಿಸುತ್ತದೆ ಎಂದು ಹೇಳಿದರು.ಸೆಪ್ಟೆಂಬರ್‌ನಿಂದ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲೂ ಆರಂಭಿಕ ಶುಲ್ಕವಿಲ್ಲದೆ ಶೂನ್ಯ ಶುಲ್ಕದಲ್ಲೇ ಖಾತೆ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಎಸ್‌ಬಿಎಂ ಡೆಪ್ಯುಟಿ ಜನರಲ್ ಮ್ಯೋನೆಜರ್ ಕೆ.ಕೆ. ಜೈನ್ ಮಾತನಾಡಿ, `ಶೀಘ್ರ ಹಾಗೂ ಕಡಿಮೆ ವೆಚ್ಚದಲ್ಲಿ ಗ್ರಾಹಕರ ಕುಂದುಕೊರತೆ ನೀಗಿಸುವುದೇ ಬ್ಯಾಂಕಿಂಗ್ ಲೋಕಪಾಲರ ಯೋಜನೆ -2006 ಉದ್ದೇಶವಾಗಿದೆ. ಯಾವುದೇ ದೂರುಗಳಿದ್ದರೂ ನೇರವಾಗಿ ಶಾಖೆಗೆ ತೆರಳಿ ಸಲ್ಲಿಸಬಹುದು. ಒಂದೊಮ್ಮೆ ಅದರಿಂದ ಸಮರ್ಪಪಕ ಉತ್ತರ ಸಿಗದಿದ್ದರೆ ನಮಗೆ ತಿಳಿಸಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದರು.ಆರ್‌ಬಿಐನ ಶಂಕರ್, ಲೀಡ್ ಬ್ಯಾಂಕ್‌ನ ಲಕ್ಷುಕುಮಾರ್, ಎಸ್‌ಬಿಎಂನ ರಂಗನಾಥ್, ಆರ್‌ಬಿಐನ ತಿವಾರಿ, ಪ್ರಾದೇಶಿಕ ಕಚೇರಿಯ ವಿನಯ್‌ಕುಮಾರ್, ವೇಣುಗೊಪಾಲ್, ವೆಂಕಟೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry