ಆರ್‌ಬಿಐ ಬಡ್ಡಿದರ ಏರಿಕೆ ಆಘಾತ!

7
ವಾಹನ, ಗೃಹ ಸಾಲ ತುಟ್ಟಿ ಸಾಧ್ಯತೆ

ಆರ್‌ಬಿಐ ಬಡ್ಡಿದರ ಏರಿಕೆ ಆಘಾತ!

Published:
Updated:

ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ್‌ ರಘುರಾಂ ಜಿ.ರಾಜನ್‌ ತಮ್ಮ ಮೊದಲ ತ್ರೈಮಾಸಿಕ ಹಣಕಾಸು ನೀತಿ ಪರಾ­ಮರ್ಶೆ­ಯಲ್ಲಿಯೇ  ಎಲ್ಲರ ನಿರೀಕ್ಷೆಗಳನ್ನೂ ಹುಸಿಗೊಳಿಸಿದ್ದಾರೆ.‘ರೆಪೊ’ ಬಡ್ಡಿದರವನ್ನು ಶೇ 0.25 ರಷ್ಟು ಏರಿಸುವ ಮೂಲಕ ಬ್ಯಾಂಕಿಂಗ್‌ ಕ್ಷೇತ್ರ, ಉದ್ಯಮ ವಲಯ, ಮುಖ್ಯವಾಗಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಭಾರಿ ಆಘಾತವನ್ನೇ ನೀಡಿದ್ದಾರೆ.ಸಾಲ ತುಟ್ಟಿ ಸಾಧ್ಯತೆ: 2 ವರ್ಷಗಳ ನಂತರ ಮೊದಲ ಬಾರಿಗೆ ‘ಆರ್‌ಬಿಐ’ ಅಲ್ಪಾವಧಿ ಬಡ್ಡಿದರ ಏರಿಕೆ ಮಾಡಿದೆ. ಇದರಿಂದ ‘ರೆಪೊ’ ದರ (ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಬಡ್ಡಿದರ) ಶೇ 7.50ಕ್ಕೆ ಜಿಗಿ ದಿದ್ದು, ಗೃಹ ಮತ್ತು ವಾಹನ ಸಾಲ ಹಾಗೂ ಕಾರ್ಪೊ­ರೇಟ್‌ ಸಾಲಗಳ ಬಡ್ಡಿ ದರ ಹೆಚ್ಚಲಿದೆ. ಈಗಾ­ಗಲೇ ಸಾಲ ಪಡೆದು ­ಮರುಪಾವತಿ ಮಾಡುತ್ತಿರು­ವವರ ‘ಇಎಂಐ’ ಕಂತು ಗಳೂ ಹೆಚ್ಚುವ ಸಂಭವವಿದೆ. ‘ರೆಪೊ’ ಬಡ್ಡಿದರ ಏರಿಕೆ ಕ್ರಮ ಶನಿವಾರ ದಿಂದಲೇ ಜಾರಿಗೆ ಬರಲಿದೆ.‘ಎಂಎಸ್‌ಎಫ್‌’ ಕಡಿತ: ಇದೇ ವೇಳೆ ‘ಆರ್‌ಬಿಐ’ ಮಾರ್ಜಿನಲ್‌  ಸ್ಟ್ಯಾಂಡಿಂಗ್‌ ಫೆಸಿಲಿಟಿ(ಎಂಎಸ್‌ಎಫ್‌) ದರವನ್ನು ಶೇ 0.75ರಷ್ಟು ಕಡಿತ ಮಾಡಿ ಶೇ 9.5ಕ್ಕೆ ತಗ್ಗಿಸಿದೆ. ಜತೆಗೆ ಬ್ಯಾಂಕುಗಳ  ನಗದು ಮೀಸಲು ಅನು­ಪಾತವನ್ನೂ (ಸಿಆರ್‌ ಆರ್‌) ಶೇ 99ರಿಂದ ಶೇ 95ಕ್ಕೆ ಇಳಿಸಿದೆ.ಹಣದುಬ್ಬರ ದರ ಹಿತಕರ ಮಟ್ಟಕ್ಕೆ ತಗ್ಗದಿರುವುದೇ ಬಡ್ಡಿದರ ಏರಿಕೆಗೆ ಪ್ರಮುಖ ಕಾರಣ ಎಂದಿರುವ ರಾಜನ್‌, ‘ರೆಪೊ ದರ ಏರಿಕೆ ಪರಿಣಾಮ ಸಮ­ತೋಲನ ಮಾಡಲು ‘ಎಂಎಸ್‌ಎಫ್‌’ ಕಡಿತ ಮಾಡ­ಲಾಗಿದೆ. ಇದರಿಂದ ಬ್ಯಾಂಕ್‌­ಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಕಡಿಮೆ’ ಎಂದು

ಪ್ರತಿಕ್ರಿಯಿ­ಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry