ಶುಕ್ರವಾರ, ಮಾರ್ಚ್ 5, 2021
17 °C

ಆರ್‌ಸಿಬಿಗೆ ಬೆದರಿದ ವಾರಿಯರ್ಸ್

ಕೆ.ಓಂಕಾರ ಮೂರ್ತಿ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌ಸಿಬಿಗೆ ಬೆದರಿದ ವಾರಿಯರ್ಸ್

ಬೆಂಗಳೂರು: ಕೊನೆಯ ಎಸೆತದಲ್ಲಿ ಸೌರಭ್ ತಿವಾರಿ ಸಿಕ್ಸರ್ ಎತ್ತುತ್ತಿದ್ದಂತೆ ಪುಣೆ ವಾರಿಯರ್ಸ್ ಆಟಗಾರರು ನಿಂತ್ಲ್ಲಲಿಯೇ ಶಾಕ್. ಆದರೆ ಪ್ರೇಕ್ಷಕರ ಖುಷಿಯ ಕೂಗು ಕೇಳಬೇಕೇ? ಆರ್‌ಸಿಬಿ, ಆರ್‌ಸಿಬಿ ಎಂಬ ಅಬ್ಬರ ಐದು ನಿಮಿಷ ನಿಲ್ಲಲೇ ಇಲ್ಲ.ಡಗ್‌ಔಟ್‌ನಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೆಲ್ಲಾ ಕ್ರೀಡಾಂಗಣದೊಳಗೆ ಜಿಗಿದು ಬಂದು ತಿವಾರಿ ಅವರನ್ನು ಎತ್ತಿ ಸಂಭ್ರಮಿಸಿದರು. ಆ ಸಂತೋಷದಲ್ಲಿ ವರುಣನೂ ಭಾಗಿಯಾದ!

ಕ್ರಿಸ್ ಗೇಲ್ ಆಟ ನೀಡುವ ಸ್ಫೂರ್ತಿಯೇ ಅಂಥದ್ದು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ರಾಹುಲ್ ಶರ್ಮ ಅವರ ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಎತ್ತಿದ್ದು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಆದರೆ ತಿವಾರಿ ಹಾಗೂ ಎಬಿ   ಡಿವಿಲಿಯರ್ಸ್ ಆಟ ಅಕ್ಷರಶಃ ಪವಾಡವನ್ನೇ ಸೃಷ್ಟಿಸಿತು. ಈ ಪಂದ್ಯವನ್ನು ಅಭಿಮಾನಿಗಳು ಸದ್ಯಕ್ಕೆ ಮರೆಯಲಾರರು.ಪರಿಣಾಮ ಪುಣೆ ವಾರಿಯರ್ಸ್ ಎದುರಿನ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯಭೇರಿ ಮೊಳಗಿಸ್ದ್ದಿದು ರಾಯಲ್ ಚಾಲೆಂಜರ್ಸ್. ಆಘಾತಕ್ಕೆ ಒಳಗಾದ ವಾರಿಯರ್ಸ್ ನಾಯಕ ಸೌರವ್ ಗಂಗೂಲಿ ಪಿಳಿಪಿಳಿ ಕಣ್ಣು ಬಿಟ್ಟು ನೋಡಿದ್ದೇ ಬಾಕಿ!ವಾರಿಯರ್ಸ್ ನೀಡಿದ 183 ರನ್‌ಗಳ ಗುರಿಯನ್ನು ಆರ್‌ಸಿಬಿ 20 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ತಲುಪಿತು. ೆಲುವಿಗಾಗಿ ಕೊನೆಯ ಓವರ್‌ನಲ್ಲಿ 21 ರನ್‌ಗಳ ಬೇಕಿದ್ದವು. ಹೆಚ್ಚಿನವರು ಜಯದ ಆಸೆ ಕೈಬಿಟ್ಟಿದ್ದರು. ಆರ್‌ಸಿವಿ ನಸೀಬು ಸರಿ ಇಲ್ಲ ಎಂದು ಮನಸ್ಸಿನಲ್ಲೇ ಕೆಲವರು ಗೊಣಗಿಕೊಂಡರು. ಆದರೆ ಡಿವಿಲಿಯರ್ಸ್ ಹಾಗೂ ತಿವಾರಿ ಆ ನಸೀಬನ್ನು ಬದಲಾಯಿಸಿಬಿಟ್ಟರು. ಕೊನೆಯ ಓವರ್‌ನಲ್ಲಿ ಅಷ್ಟು ರನ್ ನೀಡಿ `ವಿಲನ್~ ಆಗಿದ್ದು ಆಶೀಶ್ ನೆಹ್ರಾ.ಪಂದ್ಯಕ್ಕೆ ತಿರುವು ನೀಡಿದ್ದು ಗೇಲ್ (81; 48 ಎ, 4 ಬೌ, 8 ಸಿ.) ಆಟ. ಒಂದೇ ಓವರ್‌ನಲ್ಲಿ 31 ರನ್ ಗಳಿಸಿದ್ದು ಎದುರಾಳಿ ಆಟಗಾರರ ವಿಶ್ವಾಸವನ್ನೇ ಕಿತ್ತುಕೊಂಡಿತು. ಗೇಲ್ ಔಟಾದಾಗ ವಾರಿಯರ್ಸ್‌ಗೆ ತಿರುಗೇಟು ನೀಡುವ ಅವಕಾಶವಿತ್ತು. ಆದರೆ ಗೇಲ್ ಹಾಕಿ ಕೊಟ್ಟ ಹಾದಿಯಲ್ಲಿ ನಡೆದಿದ್ದು ಡಿವಿಲಿಯರ್ಸ್ (33; 14 ಎ, 2 ಬೌ, 3 ಸಿ.) ಹಾಗೂ ತಿವಾರಿ (36; 23 ಎ, 1 ಬೌ, 2 ಸಿ.).ಗೇಲ್ (ಒಟ್ಟು 85 ಸಿಕ್ಸ್) ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಎತ್ತಿದ ಆಟಗಾರ ಎನಿಸಿದರು. ಅವರು ಆ್ಯಡಮ್ ಗಿಲ್‌ಕ್ರಿಸ್ಟ್ (83) ದಾಖಲೆ ಅಳಿಸಿ ಹಾಕಿದರು.ಆದರೆ ಆರಂಭದಿಂದಲೇ ಒಂದೆಡೆ ಆರ್‌ಸಿಬಿ, ಆರ್‌ಸಿಬಿ ಎಂಬ ಮೊರೆತ. ಇನ್ನೊಂದೆಡೆ ಸ್ಥಳೀಯ ಆಟಗಾರ ರಾಬಿನ್ ಉತ್ತಪ್ಪ ಅವರ ಅಬ್ಬರದ ಬ್ಯಾಟಿಂಗ್. ಉತ್ತಪ್ಪ ಅರ್ಧ ಶತಕ ಗಳಿಸಿ ಬ್ಯಾಟ್ ಮೇಲೆತ್ತಿದಾಗ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಏನು ಮಾಡಬೇಕು ಹೇಳಿ?ಉತ್ತಪ್ಪ (69; 45 ಎ, 9 ಬೌಂ, 2 ಸಿ.) ಎದುರಾಳಿ ತಂಡದ ಆಟಗಾರನಾಗಿದ್ದರೂ ತಮ್ಮೂರಿನವ ಎಂಬ ಕಾರಣಕ್ಕೆ ಜೋರು ಸಿಕ್ಸರ್ ಕಡಲಲ್ಲಿ ತೇಲಿಸಿದ ಗೇಲ್; ನಸೀಬು ಬದಲಾಯಿಸಿದ ವಿಲಿಯರ್ಸ್, ತಿವಾರಿ ಆರ್‌ಸಿಬಿಗೆ ಬೆದರಿದ `ವಾರಿಯರ್ಸ್~ಚಪ್ಪಾಳೆ ಮೂಲಕವೇ ಅಭಿನಂದನೆ ಹೇಳಿದರು! ಆದರೆ ಚಾಲೆಂಜರ್ಸ್ ಬೌಲರ್‌ಗಳಿಗೆ ರಾಬಿನ್ ಚೆನ್ನಾಗಿಯೇ ಚಾರ್ಜ್ ಮಾಡಿದರು.

ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182

ರಾಬಿನ್ ಉತ್ತಪ್ಪ ಸಿ ಹರ್ಷಲ್ ಪಟೇಲ್ ಬಿ ಡೇನಿಯಲ್ ವೆಟೋರಿ  69ಜೆಸ್ಸಿ ರೈಡರ್ ಸಿ ಮಾಯಂಕ್ ಅಗರ್ವಾಲ್ ಬಿ ಹರ್ಷಲ್ ಪಟೇಲ್  34ಸೌರವ್ ಗಂಗೂಲಿ ಸಿ ಮಾಯಂಕ್ ಅಗರ್ವಾಲ್ ಬಿ ಆರ್.ವಿನಯ್ ಕುಮಾರ್  06ಮಾರ್ಲೊನ್ ಸ್ಯಾಮುಯೆಲ್ಸ್ ರನ್‌ಔಟ್ (ಡಿವಿಲಿಯರ್ಸ್)  34ಸ್ಟೀವನ್ ಸ್ಮಿತ್ ರನ್‌ಔಟ್ (ಡಿವಿಲಿಯರ್ಸ್/ವಿನಯ್)  16ಆ್ಯಂಜೆಲೊ ಮ್ಯಾಥ್ಯೂಸ್ ಸಿ ವಿರಾಟ್ ಕೊಹ್ಲಿ ಬಿ ಆರ್.ವಿನಯ್ ಕುಮಾರ್  10ಮಿಥುನ್ ಮನ್ಹಾಸ್ ಔಟಾಗದೆ  06ಭುವನೇಶ್ವರ್ ಕುಮಾರ್ ಔಟಾಗದೆ  00ಇತರೆ (ಲೆಗ್‌ಬೈ-3, ವೈಡ್-3, ಬೈ-1)  07ವಿಕೆಟ್ ಪತನ: 1-63 (ರೈಡರ್; 6.6); 2-108 (ಗಂಗೂಲಿ; 11.5); 3-117 (ಉತ್ತಪ್ಪ; 12.6); 4-164 (ಸ್ಮಿತ್; 17.5); 5-166 (ಸ್ಯಾಮುಯೆಲ್ಸ್; 18.3); 6-178 (ಮ್ಯಾಥ್ಯೂಸ್; 19.5)ಬೌಲಿಂಗ್: ಜಹೀರ್ ಖಾನ್ 4-0-34-0 (ವೈಡ್-1), ತಿಲಕರತ್ನೆ ದಿಲ್ಶಾನ್ 2-0-24-0, ಆರ್.ವಿನಯ್ ಕುಮಾರ್ 4-0-34-2 (ವೈಡ್-1), ಹರ್ಷಲ್ ಪಟೇಲ್ 4-0-29-1, ಡೇನಿಯಲ್ ವೆಟೋರಿ 4-0-34-1, ಕೆ.ಪಿ.ಅಪ್ಪಣ್ಣ 2-0-23-0 (ವೈಡ್-1)  ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186


ತಿಲಕರತ್ನೆ ದಿಲ್ಶಾನ್ ಸಿ ರಾಬಿನ್ ಉತ್ತಪ್ಪ ಬಿ ಅಶೋಕ್ ದಿಂಡಾ  04ಕ್ರಿಸ್ ಗೇಲ್ ಬಿ ಆಶೀಶ್ ನೆಹ್ರಾ  81ಮಾಯಂಕ್ ಅಗರ್‌ವಾಲ್ ಸಿ ಮಿಥುನ್ ಮನ್ಹಾಸ್ ಬಿ ಮಾರ್ಲೊನ್ ಸ್ಯಾಮುಯೆಲ್ಸ್  09ವಿರಾಟ್ ಕೊಹ್ಲಿ ಸಿ ರಾಹುಲ್ ಶರ್ಮ ಬಿ ಆ್ಯಂಜೆಲೊ ಮ್ಯಾಥ್ಯೂಸ್  16ಸೌರಭ್ ತಿವಾರಿ ಔಟಾಗದೆ  36ಎಬಿ ಡಿವಿಲಿಯರ್ಸ್ ಔಟಾಗದೆ  33ಇತರೆ (ಬೈ-1, ಲೆಗ್‌ಬೈ-1, ವೈಡ್-3, ನೋಬಾಲ್-2)  07ವಿಕೆಟ್ ಪತನ: 1-7 (ದಿಲ್ಶಾನ್; 2.3); 2-42 (ಅಗರ್‌ವಾಲ್; 5.6); 3-72 (ಕೊಹ್ಲಿ; 11.5); 4-127 (ಗೇಲ್; 15.4)ಬೌಲಿಂಗ್: ಅಶೋಕ್ ದಿಂಡಾ 4-0-28-1 (ನೋಬಾಲ್-1, ವೈಡ್-2), ಆಶೀಶ್ ನೆಹ್ರಾ 4-0-54-1 (ನೋಬಾಲ್-1), ಭುವನೇಶ್ವರ್ ಕುಮಾರ್ 4-0-27-0, ಮಾರ್ಲೊನ್ ಸ್ಯಾಮುಯೆಲ್ಸ್ 2-0-5-1, ಆ್ಯಂಜೆಲೊ ಮ್ಯಾಥ್ಯೂಸ್ 4-0-35-1, ರಾಹುಲ್ ಶರ್ಮ 2-0-35-0

ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 6 ವಿಕೆಟ್ ಜಯ.  

               ಪಂದ್ಯ ಶ್ರೇಷ್ಠ: ಕ್ರಿಸ್ ಗೇಲ್ 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.