ಸೋಮವಾರ, ಸೆಪ್ಟೆಂಬರ್ 16, 2019
21 °C

ಆರ್‌ಸಿಬಿ ಆಟಗಾರರ ಅಭ್ಯಾಸ

Published:
Updated:

ಬೆಂಗಳೂರು: ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಿದರು.ತಂಡದ ಕೆಲವು ಆಟಗಾರರು ಕೆಎಸ್‌ಸಿಎ `ಬಿ~ ಅಂಗಳದಲ್ಲಿ ಸುದೀರ್ಘ ಅವಧಿಯ ತಾಲೀಮು ಕೈಗೊಂಡರು. ಸೆಪ್ಟೆಂಬರ್ 23 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ವಾರಿಯರ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.ಕೋಚ್ ರೇ ಜೆನ್ನಿಂಗ್ಸ್ ಮತ್ತು ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಅವರ ಮೇಲ್ನೋಟದಲ್ಲಿ ಆಟಗಾರರ ಅಭ್ಯಾಸ ನಡೆಯಿತು. ಸೌರಭ್ ತಿವಾರಿ ಮತ್ತು ಮೊಹಮ್ಮದ್ ಕೈಫ್ ತಮ್ಮ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಲು ಪ್ರಯತ್ನ ನಡೆಸಿದರು.ಕರ್ನಾಟಕದ ಆಟಗಾರರಾದ ಅಭಿಮನ್ಯು ಮಿಥುನ್, ಎಸ್. ಅರವಿಂದ್, ರಾಜು ಭಟ್ಕಳ್ ಮತ್ತು ರ‌್ಯಾನ್ ನಿನನ್ ಅಭ್ಯಾಸದಲ್ಲಿ ಪಾಲ್ಗೊಂಡರು

Post Comments (+)