ಆಲಮಟ್ಟಿ: ಒಳ ಹರಿವು ಇಳಿಮುಖ

ಸೋಮವಾರ, ಜೂಲೈ 22, 2019
24 °C

ಆಲಮಟ್ಟಿ: ಒಳ ಹರಿವು ಇಳಿಮುಖ

Published:
Updated:

ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳ ಹರಿವಿನಲ್ಲಿ ಬುಧವಾರ ಇಳಿಮುಖವಾಗಿದೆ. ಮಂಗಳವಾರ 85,064 ಕ್ಯೂಸೆಕ್ ಇದ್ದ ಒಳ ಹರಿವು ಬುಧವಾರ 58,282ಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಬಿಡುವು ಪಡೆದಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಬುಧವಾರ ಮಳೆ ಕ್ಷೀಣಿಸಿದ್ದು ಗದಗ, ಧಾರವಾಡ, ಬಳ್ಳಾರಿ ಮತ್ತು ಉ.ಕ. ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಆದರೆ ಹಾವೇರಿ ನಗರ ಸೇರಿ ಜಿಲ್ಲೆಯ ಕೆಲವೆಡೆ ಬುಧವಾರ ರಭಸದ ಮಳೆಯಾಗಿದೆ.ಮಡಿಕೇರಿ ವರದಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಮಳೆ ಸುರಿದಿದೆ. ಸೋಮವಾರಪೇಟೆ ತಾಲ್ಲೂಕಿನ ಕುಸುಬುರು ಸಮೀಪದ ಕೆಂಚಮ್ಮನ ಬಾಣೆಯಲ್ಲಿ ಮಳೆ ಬರುವ ಸಂದರ್ಭದಲ್ಲಿ ಮರದ ರಂಬೆ ಕತ್ತರಿಸಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ  ಕುಶಾಲ್ (19) ಎಂಬಾತ ಮೃತಪಟ್ಟಿದ್ದಾನೆ. ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 14.6 ಮಿ.ಮೀ. ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry