ಗುರುವಾರ , ಮೇ 6, 2021
27 °C

ಆಲಮಟ್ಟಿ ಬಳಿ ಟೌನ್‌ಶಿಪ್: ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಆಲಮಟ್ಟಿ ಜಲಾಶಯದ ಬಳಿ ಹಾಗೂ ಬೆಂಗಳೂರಿನ ಕೋಲಾರ ಹತ್ತಿರ ಥೀಮ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.~ಸಕಾಲ~ ಯೋಜನೆಗೆ ಸೋಮವಾರ ನಗರದಲ್ಲಿ ಚಾಲನೆ ನೀಡಿ ಮಾತನಾಡಿದರು. ಈ ಎರಡು ಸ್ಥಳಗಳಲ್ಲಿ  ಎಲ್ಲ ಸೌಲಭ್ಯಗಳನ್ನು ಹೊಂದಿರುವ ಬೃಹತ್ ಪ್ರಮಾಣದ ಟೌನ್ ಶಿಪ್ ನಿರ್ಮಿಸಲಾಗುವುದು. ಇದಕ್ಕೆ ದುಬೈನ ಮಹಾರಾಜಾ ಫ್ಯಾಮಿಲಿ ಸಂಸ್ಥೆಯವರು ಆಸಕ್ತಿ ವಹಿಸಿದ್ದು, ಈಗಾಗಲೆ ಎರಡು ಬಾರಿ ರಾಜ್ಯಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ. ಇದೇ 15ರ ನಂತರ ಮುಖ್ಯಮಂತ್ರಿಗಳೊಂದಿಗೆ ತಾವು ದುಬೈಗೆ ತೆರಳುತ್ತಿದ್ದು, ಈ ಬಗ್ಗೆ ಅಲ್ಲಿ ಸಮಗ್ರ ಚರ್ಚೆ ನಡೆಸಲಾಗುವುದು ಎಂದರು.ವಿಜಾಪುರ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಎನ್‌ಟಿಪಿಸಿ ವಿದ್ಯುತ್ ಸ್ಥಾವರ ಹಾಗೂ ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು ಬರುತ್ತಿವೆ. ದ್ವಿಚಕ್ರವಾಹನದಿಂದ ವಿಮಾನದ ವರೆಗಿನ ಬಿಡಿ ಭಾಗಗಳನ್ನು ತಯಾರಿಸುವ ಉದ್ದಿಮೆಗಾಗಿ ಬಾಗಲಕೋಟೆ ಜಿಲ್ಲೆ ಕೆರೂರ ಹತ್ತಿರ 3 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ.

 

ಈ ಎಲ್ಲ ಉದ್ದಿಮೆಗಳನ್ನು ಅವಲಂಬಿಸಿ ಹೊರಗಿನಿಂದ ಒಂದು ಲಕ್ಷ ಕುಟುಂಬಗಳು ಇಲ್ಲಿಗೆ ಆಗಮಿಸಲಿವೆ. ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯದ ಟೌನ್‌ಶಿಪ್ ನಿರ್ಮಿಸಿದರೆ ಅವರೆಲ್ಲ ಇಲ್ಲಿಯೇ ವಾಸವಾಗಲಿದ್ದಾರೆ. ಇಲ್ಲದಿದ್ದರೆ ಬೆಂಗಳೂರಿಗೆ ವಲಸೆ ಹೋಗುತ್ತಾರೆ ಎಂದರು.ಆಲಮಟ್ಟಿ ಜಲಾಶಯದಲ್ಲಿ ಸದಾಕಾಲ ನೀರು ಇರುತ್ತಿದ್ದು, ಹೈದ್ರಾಬಾದ್‌ಗೂ ಹತ್ತಿರವಿದೆ. ಮೇಲಾಗಿ ವಿಜಾಪುರದಲ್ಲಿ ವಿಮಾನ ನಿಲ್ದಾಣವೂ ಸ್ಥಾಪನೆಯಾಗುತ್ತಿದೆ. ಹೀಗಾಗಿ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಮಧ್ಯದಲ್ಲಿ ಈ ಥೀಮ್‌ಪಾರ್ಕ್ ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.