ಆಲಮಟ್ಟಿ ವಿದ್ಯುತ್ ಉತ್ಪಾದನೆ ಆರಂಭ

ಸೋಮವಾರ, ಜೂಲೈ 22, 2019
23 °C

ಆಲಮಟ್ಟಿ ವಿದ್ಯುತ್ ಉತ್ಪಾದನೆ ಆರಂಭ

Published:
Updated:

ವಿಜಾಪುರ:  ಪ್ರಸಕ್ತ ಹಂಗಾಮಿನಲ್ಲಿ ಇದೇ ಪ್ರಥಮ ಬಾರಿಗೆ ಆಲಮಟ್ಟಿ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದ್ದು, ಜಲ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.ಜಲಾಶಯದಿಂದ 15,000 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಕರ್ನಾಟಕ ವಿದ್ಯುತ್ ನಿಗಮದ ಜಲ ವಿದ್ಯುತ್ ಕೇಂದ್ರದ ನಾಲ್ಕು ಘಟಕಗಳು ಕಾರ್ಯಾರಂಭಗೊಂಡಿವೆ. ಸದ್ಯ 90 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಲ್ಲಿ ಒಟ್ಟು 6 ಘಟಕಗಳಿದ್ದು, ಉತ್ಪಾದನಾ ಸಾಮರ್ಥ್ಯ ಒಟ್ಟು 290 ಮೆಗಾ ವಾಟ್.ಆಲಮಟ್ಟಿಯಲ್ಲಿ 515.40 ಮೀಟರ್ ವರೆಗೆ (66 ಟಿಎಂಸಿ ಅಡಿ) ನೀರು ಸಂಗ್ರಹವಾಗಿದೆ. ಒಳ ಹರಿವು 43,291 ಕ್ಯೂಸೆಕ್ ಇದ್ದು, ಭರ್ತಿಗೆ ಇನ್ನೂ 4.1 ಮೀಟರ್‌ನಷ್ಟು ಬಾಕಿ ಇದೆ.

ನಾಲೆಗಳಿಗೆ ನೀರು ಹರಿಸಬೇಕಾದರೆ ನಾರಾಯಣಪೂರ ಜಲಾಶಯದಲ್ಲಿ 8 ಟಿಎಂಸಿ ಅಡಿ ನೀರು ಸಂಗ್ರಹಿಕೊಳ್ಳಬೇಕು. ಹಾಗಾಗಿ ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ  (ವಿದ್ಯುತ್ ಘಟಕದ ಮೂಲಕ) ನೀರು ಬಿಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry