ಗುರುವಾರ , ಮೇ 26, 2022
23 °C

ಆಲಮಟ್ಟಿ ಸುತ್ತ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ವಿಜಾಪುರ ಜಿಲ್ಲೆಯ ಆಲಮಟ್ಟಿ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಭಾರಿ ಮಳೆ ಸುರಿದಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.ಭಾನುವಾರ ಆಲಮಟ್ಟಿಯಲ್ಲಿ 74.6 ಮಿ.ಮೀ. ಮಳೆಯಾಗಿದ್ದು, ಆಲಮಟ್ಟಿ ಸುತ್ತಮುತ್ತಲಿನ ನಿಡಗುಂದಿ, ಅರಳದಿನ್ನಿ, ಬೇನಾಳ, ವಂದಾಲ ಗ್ರಾಮದಲ್ಲಿಯೂ ಮಳೆಯಾಗಿದೆ.ಭಾನುವಾರದಿಂದ ಆಲಮಟ್ಟಿ ಜಲಾಶಯಕ್ಕೆ 10, 697 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 519.6 ಮೀ ಎತ್ತರದ ಜಲಾಶಯದಲ್ಲಿ 519.46 ಮೀ ವರೆಗೆ ನೀರು ಸಂಗ್ರಹವಾಗಿದೆ.ವಿದ್ಯುತ್ ಉತ್ಪಾದನೆ: ಆಲಮಟ್ಟಿ ವಿದ್ಯುತಾಗಾರದ ಮೂರು ಘಟಕಗಳಿಂದ 2.2 ದಶಲಕ್ಷ ಯುನಿಟ್ ಪ್ರತಿನಿತ್ಯ ವಿದ್ಯುತ್‌ಉತ್ಪಾದಿಸಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.