ಬುಧವಾರ, ಜೂನ್ 16, 2021
22 °C

ಆಲಿಕಲ್ಲು ಮಳೆ: ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯ ಆಳಂದ ತಾಲ್ಲೂಕಿ ನಲ್ಲಿ ಈಚೆಗೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಸುಮಾರು ರೂ.200 ಕೋಟಿ ಮೌಲ್ಯದ ಬೆಳೆ ಹಾನಿಯಾ ಗಿದ್ದು, ಸರ್ಕಾರ ಪರಿಹಾರ ಘೋಷಿಸ ಬೇಕು ಎಂದು ಒತ್ತಾಯಿಸಿ ಶಾಸಕ ಬಿ. ಆರ್‌ ಪಾಟೀಲ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಮುಂಭಾಗ ದಲ್ಲಿ ಪ್ರತಿಭಟನೆ ನಡೆಸಿದರು.ಈಚಿನ ಹಲವು ದಶಕಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಕಾಲಿಕ ಆಲಿಕಲ್ಲು ಮಳೆ ಆಗಿರುವ ನಿದರ್ಶನ ಇಲ್ಲ.  ಮಳೆಯಿಂದ ಫಲವತ್ತಾಗಿ ಬೆಳೆ­ದಿದ್ದ ಜೋಳ, ಗೋಧಿ, ಕಡಲೆ, ಕುಸುಬಿ, ದ್ರಾಕ್ಷಿ, ಪಪ್ಪಾಯ, ಬಾಳೆ, ನಿಂಬೆ, ಮಾವು, ಕರ್ಬೂಜ, ಟೊಮೆಟೊ, ಈರುಳ್ಳಿ, ಮೆಣಸಿನ ಕಾಯಿ, ಬದನೆ, ಗಜ್ಜರಿ (ಕ್ಯಾರೆಟ್‌), ಅರಶಿಣ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ 12 ಎತ್ತು, ಒಂದು ಆಕಳು ಹಾಗೂ 30 ಕುರಿಗಳು ಸತ್ತು ಹೋಗಿವೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿ­ದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ಮುಖ್ಯಮಂತ್ರಿ ಅವ ರಿಗೆ ಜಿಲ್ಲಾಧಿಕಾರಿ ಮೂಲಕ ಕಳುಹಿಸಿ ಕೊಟ್ಟ ಮನವಿಯಲ್ಲಿ ತಿಳಿಸಿದ್ದಾರೆ.‘ನೆರೆಯ ಮಹಾರಾಷ್ಟ್ರದಲ್ಲಿ ಇದೇ ಪ್ರಮಾಣದಲ್ಲಿ ಹಾನಿ ಯಾಗಿದ್ದು, ಅಲ್ಲಿನ  ಮುಖ್ಯಮಂತ್ರಿ ಹಾಗೂ ಕೇಂದ್ರ ಕೃಷಿ ಸಚಿವರು ಪ್ರವಾಸ ಮಾಡುತ್ತಿ­ದ್ದಾರೆ. ಸರ್ಕಾರವೂ ಕೂಡಲೇ ವೈಜ್ಞಾನಿಕ ಸರ್ವೆ ನಡೆಸಿ, ಚುನಾವಣಾ ಆಯೋ ಗದಿಂದ ಪರವಾನಗಿ ಪಡೆದು ಪರಿಹಾರ ವನ್ನು ಘೋಷಿಸಬೇಕು’ ಎಂದು ಶಾಸಕ ಬಿ.ಆರ್‌ ಪಾಟೀಲ ಆಗ್ರಹಿಸಿದರು.ಶಿವಪುತ್ರಪ್ಪ ಪಾಟೀಲ ಮುನ್ನಳ್ಳಿ, ವಿಠ್ಠಲರಾವ ಪಾಟೀಲ, ಮಂಗಲಾ ಬಾಯಿ, ಸಿದ್ದರಾಮ ಪಾಟೀಲ, ಚಂದ್ರಕಾಂತ ಭೂಸನೂರ, ಬಿ.ವಿ. ಚಕ್ರವರ್ತಿ, ಸುಲೇಮಾನ, ರಾಜಶೇಖರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.