ಬುಧವಾರ, ಜೂನ್ 23, 2021
30 °C

ಆಲಿಕಲ್ಲು ಮಳೆ: ಸಮೀಕ್ಷೆ ವಿಳಂಬ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಮಾದನ ಹಿಪ್ಪರ್ಗಾ ವಲಯದದಲ್ಲಿ ಅಕಾಲಿಕ ಆಲಿಕಲ್ಲು ಮಳೆ ಸುರಿದು ಅಪಾರ ಪ್ರಮಾ­ಣದಲ್ಲಿ ಬೆಳೆಹಾನಿ ಸಂಭವಿಸಿದೆ.  ಆದರೆ  ಸಮೀಕ್ಷೆ ಕಾರ್ಯ ಪ್ರಾರಂಭಿಸ­ದಿರುವುದು ರೈತರಲ್ಲಿ ಕಳವಳ ಮೂಡಿಸಿದೆ.ಕಳೆದ ಸೋಮವಾರ  ಬೆಳಮಗಿ ಸುತ್ತಲ ಗ್ರಾಮಗಳಲ್ಲಿ ಬಿದ್ದ ಆಲಿಕಲ್ಲು ಮಳೆಗೆ ಕೋಟ್ಯಂತರ ಮೌಲ್ಯದ ಬೆಳೆ ಹಾಗು ಜಾನುವಾರುಗಳು ಸಾವನ್ನ­್ಪಿದ್ದವು. ಮಾದನ ಹಿಪ್ಪರ್ಗಾ, ಮದ­ಗುಣಕಿ, ದರ್ಗಾ ಶಿರೂರು, ಕೆರೂರು, ಚಲ­ಗೇರಾ, ನಿಂಗದಳ್ಳಿ, ಕಾಮನಹಳ್ಳಿ, ನಿಂಬಾಳ, ಅಳಂಗಾ, ತಡೋಳಾ ಸೇರಿ­ದಂತೆ ವಿವಿಧ ಗ್ರಾಮಗಳಲ್ಲಿ ಆಲಿಕಲ್ಲು ಮಳೆಗೆ ತೋಟಗಾರಿಕೆ ಬೆಳೆಯಾದ ದ್ರಾಕ್ಷಿ, ಬಾಳೆ, ಪಪ್ಪಾಯಿ, ರೇಷ್ಮೆ ಹೆಚ್ಚಾಗಿ ಹಾನಿಯಾಗಿವೆ.ಮಾದನ ಹಿಪ್ಪರ್ಗಾ, ಕೆರೂರು, ನಿಂಬಾಳ ಮತ್ತು ನಿಂಗದಳ್ಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ.  ಕಾಶಿನಾಥ ಪರೇಣಿ, ನಾಗಪ್ಪ ಪರೇಣಿ, ಶಿವಪುತ್ರ ದುದ್ದಗಿ ಅವರ ತರಕಾರಿ ಬೆಳೆ, ರಾಜಶೇಖರ ಗಡ್ಡದ, ಶಾಂತಮಲ್ಲಯ್ಯ ಸ್ವಾಮಿ ಅವರ ದ್ರಾಕ್ಷಿ, ಶಿವಾನಂದ ಭೋಗನಹಳ್ಳಿಯ ಕಲ್ಲಂಗಡಿ, ಅಶೋಕ ಇಕ್ಕಳಕಿ, ಜನಾರ್ಧನ ಕುಲಕರ್ಣಿ ಅವರ ನುಗ್ಗೆಕಾಯಿ ಬನ ಹೆಚ್ಚು ನಷ್ಟಕ್ಕೀ­ಡಾಗಿದೆ. ಮದಗುಣಕಿಯಲ್ಲಿ  ಕಬ್ಬು ಬಿರುಗಾಳಿಗೆ ನೆಲ ಕಚ್ಚಿದೆ.ಆಲಿಕಲ್ಲು ಮಳೆಗೆ ಗುಡಿಸಲು ಮತ್ತು ಮನೆಗಳ ಮೇಲಿನ ತಗಡು ಹೊದಿಕೆ ನೆಲಕ್ಕುರುಳಿವೆ.‘ತುಂಬಿದ ತೆನೆಗಳಿದ್ದ ಜೋಳ, ಗೋಧಿ, ಕಡಲೆ ಸೇರಿದಂತೆ ಇತರ ಬೆಳೆಗಳು , ಕೊಯ್ಲು ಮಾಡಿ ಗುಡ್ಡೆ ಹಾಕಿದ ಬೆಳೆಗಳು ಬಿರುಗಾಳಿ ಮತ್ತು ಆಲಿಕಲ್ಲು ಮಳೆ ನೀರಿಗೆ ತೋಯ್ದು ಹಾಳಾಗುವ ಸ್ಥಿತಿ ಮುಟ್ಟಿವೆ’ ಎಂದು ದರ್ಗಾ ಶಿರೂರು ರೈತ ಶ್ರೀಶೈಲ ಗಂಟೆ ಹೇಳಿದರು.

‘ಕಳೆದ ಐದು ದಿನಗಳಿಂದ ಆಗಾಗ್ಗೆ ತಾಲ್ಲೂಕಿನ ಎಲ್ಲಡೆ ಮಳೆ ಬರುತ್ತಿರುವ ಕಾರಣ ರೈತರು ಹೊಲದಲ್ಲಿ ಬೆಳೆದ ಬೆಳೆಗಳು ಹೊರತರಲು ಪರದಾಡು­ತ್ತಿದ್ದಾರೆ. ಗೋಧಿ ,ಜೋಳ, ಕಡಲೆ ಫಲ ಸಿಗದಂತಾಗಿದೆ’ ಎಂದು ಮಾದನ ಹಿಪ್ಪರ್ಗಾದ ರಮೇಶ ಇಕ್ಕಳಕಿ ಹೇಳಿದರು.ಹಾನಿ ಸಮೀಕ್ಷೆ ವಿಳಂಬ

ತಾಲ್ಲೂಕಿನಲ್ಲಿ ಕಳೆದ ಒಂದು ವಾರ­ದ­ಲ್ಲಿಯೇ ಮೂರು ಬಾರಿ ಆಲಿಕಲ್ಲು ಮಳೆ ಸುರಿದು ಅಪಾರ ಪ್ರಮಾಣ­ದಲ್ಲಿ ಬೆಳೆಹಾನಿಯಾ ದರೂ, ರೈತರ ಹೊಲ­­ಗ­ಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀ­ಕ್ಷೆಯನ್ನು ತ್ವರಿತಗತಿ ಮಾಡದಿ­ರು­ವುದು ರೈತರಲ್ಲಿ ಆತಂಕ ಮೂಡಿಸಿದೆ.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿ­ಗಳು ಬೆಳೆ ಹಾನಿ ಬಗ್ಗೆ ಪರಿಶೀಲನೆ ಕೈಗೊಳ್ಳುತ್ತಿಲ್ಲ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮೌಲಾ ಮುಲ್ಲಾ ಆತಂಕ ವ್ಯಕ್ತಪಡಿ­ಸಿ­ದ್ದಾರೆ. ’ ರೈತರ ಅಲೆದಾಟ ತಪ್ಪಿ­ಸಲು ಅಧಿಕಾರಿಗಳು ಸ್ವಯಂ ತಂಡ ರಚಿಸಿ­ಕೊಂಡು ಸಮೀಕ್ಷೆ ನಡೆಸಬೇಕು’ ಎಂದು ರೈತ  ಕಲ್ಯಾಣಿ ತುಕಾಣೆ, ಶ್ರೀಶೈಲ ಪಾಟೀಲ ಭೂಸ­ನೂರ, ಮಹಿ­ಬೂಬ ಫಣಿಬಂಧ ಒತ್ತಾ­ಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.