ಆಲಿಕಲ್ಲು ಮಳೆ: ಹಾಳಾದ ಬೆಳೆ

7

ಆಲಿಕಲ್ಲು ಮಳೆ: ಹಾಳಾದ ಬೆಳೆ

Published:
Updated:
ಆಲಿಕಲ್ಲು ಮಳೆ: ಹಾಳಾದ ಬೆಳೆ

ಹಿರೇಕೆರೂರ: ತಾಲ್ಲೂಕಿನ ಚಿನ್ನಮುಳಗುಂದ, ಯೋಗಿಕೊಪ್ಪ ಗ್ರಾಮಗಳ ಸುತ್ತಮುತ್ತ ಸುರಿದ ಭಾರಿ ಆಲಿಕಲ್ಲು ಮಳೆಗೆ ಮೆಣಸಿನ ಬೆಳೆ, ಕೋಸು, ಟೊಮೆಟೊ ಸೇರಿದಂತೆ ಹಲವಾರು ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ.ಈ ಭಾಗದಲ್ಲಿ ನೂರಾರು ಎಕರೆ ಬೆಳೆ ಹಾನಿ ಸಂಭವಿಸಿದೆ. ಆಲಿಕಲ್ಲು ಹೊಡೆತಕ್ಕೆ ಬಹುತೇಕ ಬೆಳೆಗಳೆಲ್ಲ ನೆಲಕ್ಕೆ ಉರುಳಿದ್ದು, ನಂತರದಲ್ಲಿ ಒಣಗಲಾರಂಭಿಸಿವೆ. ಉತ್ತಮ ಬೆಳೆ ಹಾಗೂ ಬೆಲೆಯಿಂದಾಗಿ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಚಿಂತೆಗೀಡಾಗಿದ್ದಾರೆ.

 

“ಮೆಣಸಿನ ಗಿಡವನ್ನು ಎರಡೂವರೆ ಎಕರೆಯಲ್ಲಿ ನಾಟಿ ಮಾಡಿದ್ದೆವು. ಸಸಿ ಭರ್ಜರಿಯಾಗಿ ಬೆಳೆದಿತ್ತು. ಒಳ್ಳೆಯ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾಗ ಅಕಾಲಿಕ ಆಲಿಕಲ್ಲು ಮಳೆಯಿಂದ ಗಿಡದಲ್ಲಿನ ಹೂವು, ಕಾಯಿಗಳು ಉದುರಿ ಹೋಗಿದ್ದು, ಗಿಡಗಳು ಒಣಗುತ್ತಿವೆ” ಎಂದು ಚಿನ್ನಮುಳಗುಂದ ಗ್ರಾಮದ ರೈತ ರಮೇಶ ಈಳಿಗೇರ ನೊಂದು ನುಡಿದರು.

ಅನೇಕ ರೈತರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಹಾನಿ ಸಮೀಕ್ಷೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry