ಆಲೂಗಡ್ಡೆ: ಪರಿಶೀಲಿಸಿದ ಅಧಿಕಾರಿಗಳು

7

ಆಲೂಗಡ್ಡೆ: ಪರಿಶೀಲಿಸಿದ ಅಧಿಕಾರಿಗಳು

Published:
Updated:

ಕೋಲಾರ: ತಾಲ್ಲೂಕಿನ ಅಂಕತಟ್ಟಿ ಗ್ರಾಮದ ರೈತರ ಆಲೂಗಡ್ಡೆ, ಕ್ಯಾಪ್ಸಿಕಂ ಬೆಳೆಗೆ ವ್ಯಾಪಕವಾಗಿ ಹರಡಿರುವ ಅಂಗಮಾರಿ ರೋಗವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಚೆಗೆ ಪರಿಶೀಲಿಸಿದರು.ಇಲಾಖೆ ಅಧಿಕಾರಿಗಳಾದ ಮಂಜುನಾಥ್, ಆಂಜನೇಯರೆಡ್ಡಿ, ಬೆಳೆ ಪರಿಶೀಲಿಸಿ ರೋಗ ಹತೋಟಿಗೆ ಬಾರದಿರಲು ಕಾರಣ ನಕಲಿ ಕ್ರಿಮಿನಾಶಕ. ನಕಲಿ ಔಷಧಿ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಗೆ ಸೂಚಿಸುತ್ತೇವೆ ಎಂದು ಭರವಸೆ ನೀಡಿದರು.ತೋಟಗಾರಿಕೆ ಇಲಾಖೆಯಿಂದ ಎಲ್ಲ ಬೆಳೆಗಳ ಕುರಿತು 15 ದಿವಸಕ್ಕೆ ಒಮ್ಮೆ ರೈತರಲ್ಲಿ ಅರಿವು ಮೂಡಿಸಲಾಗುವುದು. ಮಾಧ್ಯಮದ ಮತ್ತು ಪತ್ರಿಕೆಗಳ ಮೂಲಕ ರೈತರಿಗೆ ತಿಳಿವಳಿಕೆ ನೀಡಲಾಗುವುದು ಎಂದು ಹೇಳಿದರು.ರೈತರು ಗುಣಮಟ್ಟದ ಔಷಧಿಕೊಳ್ಳುವಾಗ ಕಡ್ಡಾಯವಾಗಿ ರಸೀದಿ ತಪ್ಪದೆ ಪಡೆದುಕೊಳ್ಳಬೇಕು. ಇದರಿಂದ ನಕಲಿ ಔಷಧಿ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದರು.ರೈತ ಶ್ರೀನಿವಾಸಗೌಡ, ಸುಗಟೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ಎ.ಸಿ.ಭಾಸ್ಕರ್, ರೈತ ಸಂಘ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಅಧ್ಯಕ್ಷ ನಾರಾಯಣಗೌಡ, ಬಂಗವಾದಿ ನಾಗರಾಜ್‌ಗೌಡ, ಪ್ರಗತಿ ಪರ ರೈತ ನಜುಂಡೇಶ್ವರ, ಮೂರಂಡಹಳ್ಳಿ ಶಿವಾರೆಡ್ಡಿ ಮುಂತಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry