ಆಲೋಚನೆ ಇಲ್ಲ: ಸಿದ್ದರಾಮಯ್ಯ

7
ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ

ಆಲೋಚನೆ ಇಲ್ಲ: ಸಿದ್ದರಾಮಯ್ಯ

Published:
Updated:

ಚಿತ್ರದುರ್ಗ: ‘ಲೋಕಸಭಾ ಚುನಾವಣೆಯಲ್ಲಿ ಯಾವ ಸಚಿವರನ್ನು ಕಣಕ್ಕೆ ಇಳಿಸುವ ಯೋಚನೆ ಇಲ್ಲ. ಹಾಗೇನಾದರೂ  ಇದ್ದಲ್ಲಿ  ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಶನಿವಾರ  ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರದ (ಆಧಾರ್‌) ಮುಖ್ಯಸ್ಥ ನಂದನ್ ನಿಲೇಕಣಿ ಕಾಂಗ್ರೆಸಿನಿಂದ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುವ ಕುರಿತ ಪ್ರಶ್ನೆಗೆ; ‘ಅವರೂ ಒಬ್ಬ ಆಕಾಂಕ್ಷಿ’ ಎಂದು ಚುಟುಕಾಗಿ ಉತ್ತರಿಸಿದರು.‘ಅತೃಪ್ತರನ್ನು ಹೇಗೆ ಸಮಾಧಾನ­ಪಡಿಸುತ್ತೀರಿ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ಪಕ್ಷದಲ್ಲಿ ಯಾರೂ ಅತೃಪ್ತರಿಲ್ಲ. ಶಿಫಾರಸುಗೊಂಡ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗುತ್ತದೆ’ ಎಂದರು.‘ಲೋಕಾಯುಕ್ತಕ್ಕೆ ಸರ್ಕಾರ ಸಂಪೂರ್ಣ ಅಧಿಕಾರ- ನೀಡಿಲ್ಲ ಎಂದು ಲೋಕಾಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದ ಪತ್ರ ಕಾಣೆಯಾದ ಕುರಿತ   ಪ್ರಶ್ನೆಗೆ, ‘ಆ ಪತ್ರ ನನ್ನ ಕೈಸೇರಿಲ್ಲ. ಮುಖ್ಯ ಕಾರ್ಯದರ್ಶಿಯವರಿಗೆ ತಲುಪಿದೆ. ಅದೇನೆ ಇರಲಿ, ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡುತ್ತದೆ. ಭ್ರಷ್ಟಾಚಾರದ ಸಂಪೂರ್ಣ  ನಿರ್ಮೂಲನೆಗೆ ಎಲ್ಲ ಅಗತ್ಯ ಸಹ­ಕಾರಗಳನ್ನು ನೀಡುತ್ತದೆ’  ಎಂದು ಸಿದ್ದರಾಮಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry