ಭಾನುವಾರ, ಜನವರಿ 19, 2020
20 °C

ಆಳಂದ: ಮಹಾರಾಷ್ಟ್ರಕ್ಕೆ ಕಬ್ಬು ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ರಾಜ್ಯ ಸರ್ಕಾರ ಅಧಿವೇಶನ­ದಲ್ಲಿ ಪ್ರಕಟಿಸಿದ ಕಬ್ಬಿನ ದರ ನೀಡಲು ರಾಜ್ಯದ ಕಾರ್ಖಾನೆಗಳು ಮುಂದಾಗದ ಹಿನ್ನೆಲೆಯಲ್ಲಿ ಅನೇಕ ರೈತರು ನೆರೆಯ ಮಹಾರಾಷ್ಟ್ರದ ಕಾರ್ಖಾ­ನೆ­ಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ.‘ತಾಲ್ಲೂಕಿನ ಏಕೈಕ ಸಕ್ಕರೆ ಕಾರ್ಖಾನೆ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಸಹ ಮೊದಲು ನೀಡಿದ ಬೆಲೆ ಮುಂದುವರಿ­ಸಿಕೊಂಡು ಹೋಗ ಲಾಗುವುದು’ ಎಂದು ಘೋಷಿಸಿದೆ.  ‘ಕಾರ್ಖಾನೆ ರೈತರಿಂದ ನಾವೂ ನೀಡುವ ಬೆಲೆಯನ್ನೆ ಸ್ವೀಕರಿಸಬೇಕು ಎಂಬ ಕರಾರು ಪತ್ರ ಪಡೆದು ಕಬ್ಬು ಪಡೆದು ಕೊಳ್ಳುತ್ತಿದೆ’ ಎಂಬ ಆರೋಪ­ಗಳು ಕೇಳಿಬರುತ್ತಿದೆ.ರಾಜ್ಯಾದ್ಯಂತ ಕಬ್ಬು ಬೆಲೆ ಹೆಚ್ಚಳಕ್ಕೆ ಹೋರಾಟ ತೀವ್ರಗೊಂಡ ಪರಿಣಾಮ ಇಲ್ಲಿಯ ರೈತರ ನಿರೀಕ್ಷೆಯು ಹೆಚ್ಚಿದೆ. ಆದರೆ ಕಳೆದ ಒಂದು ವಾರದಿಂದ ಸಮಸ್ಯೆ ಬಗೆಹರಿಯದ ಕಾರಣ ನೆರೆಯ ಮಹಾರಾಷ್ಟ್ರದ ದುಧನಿ, ಅಕ್ಕಲ­ಕೋಟ, ಸೋಲಾಪುರ, ಮುರುಮ ಕಾರ್ಖಾನೆ ಗಳು ತಾಲ್ಲೂಕಿನ ರೈತರ ಕಬ್ಬು ಖರೀದಿಸುವ ಪ್ರಯತ್ನ ಆರಂಭಿಸಿವೆ.‘ಸ್ಥಳೀಯ ಕಾರ್ಖಾನೆಯು ಕಬ್ಬು ಕಟಾವಿಗೆ ಕಾರ್ಮಿಕರ ತಂಡ ರಚಸಿ ಕಳುಹಿಸುವಲ್ಲಿ ವಿಳಂಬ ಮಾಡುತ್ತಿರು­ವುದರಿಂದಲೂ ರೈತರು ನೆರೆಯ ರಾಜ್ಯದ ಕಾರ್ಖಾನೆಗಳಿಗೆ ಕಬ್ಬು ಸಾಗಿ ಸುತ್ತಿದ್ದಾರೆ’ ಎಂದು ನಿಂಬಾಳದ ರೈತ ಗುರುಶಾಂತ ಪಾಟೀಲ ಪ್ರಜಾವಾಣಿ ಗೆ ತಿಳಿಸಿದರು.ತಾಲ್ಲೂಕಿನಲ್ಲಿಈ ಬಾರಿ ಒಟ್ಟು 5093 ಹೆಕ್ಟರ್ ಕಬ್ಬು  ಬೆಳೆಯ­ಲಾಗಿದೆ. ಮಳೆಯ ಅಭಾವದ ಕೊರತೆ ಹಾಗೂ  ಅಂತರ್ಜಲದ ಕುಸಿತದಿಂದ  ಕಬ್ಬು ಬೆಳೆಯುವ ಪ್ರದೇಶದಲ್ಲಿ ಸುಮಾರು 400 ಹೆಕ್ಟೇರ್ ನಷ್ಟು ಕಡಿತವಾಗಿದೆ ಎಂದು ಕೃಷಿ ಇಲಾಖೆಯ ವರದಿ ಸ್ಪಷ್ಟಪಡಿಸಿದೆ.ಅಮರ್ಜಾ ನದಿ ತಟದ ಭೂಸನೂರ, ಕೊರಳ್ಳಿ, ರಾಜವಾಳ, ಗುಳ್ಳೋಳ್ಳಿ, ದ್ಯಾವಂತಗಿ, ಹಿತ್ತಲ­ಶಿರೂರ, ಜವಳಿ (ಡಿ) ಮತ್ತಿತರ ಗ್ರಾಮ­ಗಳ ರೈತರು ಅಧಿಕವಾಗಿ ಕಬ್ಬು ಬೆಳೆದಿ­ದ್ದಾರೆ. ಕಬ್ಬು ಕಟಾವಿಗೆ ಬಂದಿದೆ.ಸರ್ಕಾರ ಮತ್ತು ಕಾರ್ಖಾನೆಗಳ ಆಡಳಿತ ಮಂಡಳಿ­ಗಳ ಹಗ್ಗ–ಜಗ್ಗಾಟ ನಡುವೆ ಕಬ್ಬು ಹಾಳಾಗುವುದನ್ನು ತಡೆಯಲು ಹಾಗೂ ಇಳುವರಿ ಕಡಿಮೆ­ಯಾಗದರೆ ಯಾರು ತೆಗೆದು­ಕೊಂಡು ಹೋದರೂ ಅಷ್ಟೆ ಎಂಬ ಕಾರಣಕ್ಕೆ ಈ ನಿರ್ಣಯ ಕೈಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)