ಆಳ್ವಾಸ್ ಕ್ರೀಡಾ ಕ್ಲಬ್‌ಗೆ ಸಮಗ್ರ ಪ್ರಶಸ್ತಿ

7

ಆಳ್ವಾಸ್ ಕ್ರೀಡಾ ಕ್ಲಬ್‌ಗೆ ಸಮಗ್ರ ಪ್ರಶಸ್ತಿ

Published:
Updated:

ಉಡುಪಿ: ಮೂಡುಬಿದಿರೆಯ ಆಳ್ವಾಸ್ ಕ್ರೀಡಾ ಕ್ಲಬ್, ಅಜ್ಜರಕಾಡು ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಕಾರ್ಪ್ ಬ್ಯಾಂಕ್ ಪ್ರಾಯೋಜಿತ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ  ಕೊನೆಯ ದಿನವೂ ಮುನ್ನಡೆ ಕಾಯ್ದುಕೊಂಡು `ಸಮಗ್ರ ಪ್ರಶಸ್ತಿ~ಯನ್ನು ತನ್ನದಾಗಿಸಿಕೊಂಡಿತು.

ಒಟ್ಟಾರೆ ಈ ಕೂಟದಲ್ಲಿ 12 ದಾಖಲೆಗಳು ಮೂಡಿಬಂದವು. ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಜೇತರಿಗೆ ಚಾಂಪಿಯನ್ಸ್ ಟ್ರೋಫಿ  ಪ್ರದಾನ ಮಾಡಿದರು. ಅಂತಿಮ ದಿನವಾದ ಭಾನುವಾರ 18 ವರ್ಷದೊಳಗಿನ ಬಾಲಕಿಯರ ವಿಭಾಗದ ಡಿಸ್ಕಸ್ ಎಸೆತದಲ್ಲಿ ದ.ಕ. ಜಿಲ್ಲೆಯ ಪ್ರಿಯಾಂಕಾ ಜೆ.ಎಸ್. 35 ಮೀಟರ್ ದೂರ ಎಸೆದು 2003ರಲ್ಲಿ ಎಂ.ಸ್ನೇಹಾ ಸ್ಥಾಪಿಸಿದ್ದ 33.83 ಮೀ. ದಾಖಲೆ ಅಳಿಸಿ ಹಾಕಿದರು.

20 ವರ್ಷದೊಳಗಿನ ಬಾಲಕಿಯರ ಪೋಲ್‌ವಾಲ್ಟ್‌ನಲ್ಲಿ ಆತಿಥೇಯ ಉಡುಪಿ ತಂಡದ ಕೀರ್ತಿ 2.35 ಮೀ. ಎತ್ತರ ಜಿಗಿದು 2010ರಲ್ಲಿ ತಮ್ಮದೇ ಹೆಸರಲ್ಲಿದ್ದ (2.30 ಮೀ.)  ದಾಖಲೆಯನ್ನು ಉತ್ತಮಪಡಿಸಿಕೊಂದರು.

ಪುರುಷರ ಹ್ಯಾಮರ್ ಎಸೆತದಲ್ಲಿ ಎಂ.ಇ.ಜಿ.ಯ ಸುರೇಂದ್ರ ಕುಮಾರ್ 58.05 ಮೀ. ದೂರ ಎಸೆದು 1991ರಲ್ಲಿ ಹರೀಶ್ ಶೆಟ್ಟಿ ಅವರ ಹೆಸರಲ್ಲಿದ್ದ 56.80 ಮೀ. ದಾಖಲೆ ಅಳಿಸಿಹಾಕಿದರು. 14 ವರ್ಷದೊಳಗಿನ ಬಾಲಕರ ಷಾಟ್‌ಪಟ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್‌ನ ಮಸೂದ್ ಅಹಮ್ಮದ್ 12.44 ಮೀ. ದೂರ ಎಸೆದು 2009ರಲ್ಲಿ ಭರತ್ ಎಫ್.ರಾಥೋಡ್ ಹೆಸರಿನಲ್ಲಿದ್ದ 12.07 ಮೀ. ದಾಖಲೆ ಅಳಿಸಿದರು.

ಶ್ರೇಷ್ಠ ಅಥ್ಲೀಟ್‌ಗಳು: ವಿನಾಯಕ್ (ದ.ಕ), ಸೌಮ್ಯಾ ಶೆಟ್ಟಿ (ಆಳ್ವಾಸ್), ಯಲ್ಲಪ್ಪ (ಚಂದರಗಿ ಕ್ರೀಡಾಶಾಲೆ), ಪಲ್ಲವಿ ಎಚ್.ಆರ್. (ಎಸ್‌ಎಐ, ಮಡಿಕೇರಿ), ಶಂಶೀರ್ (ಆಳ್ವಾಸ್), ಪ್ರಿಯಾಂಕಾ (ಎಸ್‌ಎಐ, ಬೆಂಗಳೂರು), ವಿದ್ಯಾಸಾಗರ್ (ಆಳ್ವಾಸ್), ರೆಬೆಕಾ ಜೋಸ್ (ಡಿವೈಎಸ್‌ಎಸ್), ಸೋನಿತ್ ಮೆಂಡನ್ (ದ.ಕ.) ಹಾಗೂ ಶ್ರೀಮಾ ಪ್ರಿಯದರ್ಶಿನಿ (ಆಳ್ವಾಸ್) ಅವರು ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ `ಶ್ರೇಷ್ಠ ಅಥ್ಲೀಟ್~ ಎನಿಸಿಕೊಂಡರು.

ಮೂರನೇ ದಿನದ ಫಲಿತಾಂಶಗಳು: ಚಿನ್ನ ಗೆದ್ದವರು

ಪುರುಷರು: 200 ಮೀ ಓಟ:
ವೀರೇಂದ್ರ (ಆಳ್ವಾಸ್), ಕಾಲ: 22.2 ಸೆ.; 1600 ಮೀ. ರಿಲೆ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್, ಕಾಲ: 3 ನಿ.23.8 ಸೆ.; ಜಾವೆಲಿನ್ ಎಸೆತ: ಪುರಂದರ (ಕಾರ್ಪ್ ಬ್ಯಾಂಕ್), ದೂರ: 71.45 ಮೀ.; ಡಿಸ್ಕಸ್ ಎಸೆತ: ದೀಪಕ್ ಚೌಧರಿ (ಎಂ.ಇ.ಜಿ) ದೂರ-45.25 ಮೀ.; ಹ್ಯಾಮರ್ ಎಸೆತ: ಸುರೀಂದರ್ ಕುಮಾರ್ (ಎಂ.ಇ.ಜಿ), ದೂರ-58.05 ಮೀ.; ಲಾಂಗ್‌ಜಂಪ್: ರತೀಶ್ ಕುಮಾರ್ (ಎಂ.ಇ.ಜಿ), ದೂರ: 7.47 ಮೀ.

20 ವರ್ಷದೊಳಗಿನವರು: 400 ಮೀ. ಓಟ: 200 ಮೀ. ಓಟ: ವಿದ್ಯಾಸಾಗರ್ (ಆಳ್ವಾಸ್) ಕಾಲ-22.6ಸೆ.; ಜೀವನ್ ಕೆ.ಎಸ್. (ಡಿವೈಎಸ್‌ಎಸ್, ಬೆಂಗಳೂರು), ಕಾಲ: 49.8 ಸೆ.;  1600 ಮೀ. ರಿಲೆ: ಆಳ್ವಾಸ್ ಸ್ಟೋರ್ಟ್ಸ್‌ಕ್ಲಬ್. ಕಾಲ-3.26.8 ಸೆ.: ಡೆಕ್ಲಾಥಾನ್: ನಾಗೇಂದ್ರಪ್ರಸಾದ್ (ಆಳ್ವಾಸ್), 5133 ಪಾಯಿಂಟ್ಸ್.; ಪೋಲ್‌ವಾಲ್ಟ್: ನಿತ್ಯಾನಂದ (ಡಿಎಎ, ಉಡುಪಿ), ಎತ್ತರ-3.25ಮೀ.; ಹ್ಯಾಮರ್ ಎಸೆತ: ಖಾಸಿಂ (ಚಾಲುಕ್ಯ, ಬಾದಾಮಿ) ದೂರ: 53.48ಮೀ.; ಲಾಂಗ್‌ಜಂಪ್: ಜೋಯಲ್ ಅಂಜು ಕಾರ್ದೋಜ್ (ಆಳ್ವಾಸ್), ದೂರ: 7.03 ಮೀ.  

18 ವರ್ಷದೊಳಗಿನವರು: 200ಮೀ : ಮದುಸೂಧನ್ ಎಂ.ಆರ್. (ಐಎಎ ಬೆಂ.)ಕಾಲ 23.5 ಸೆ.; 400 ಮೀ. ಓಟ: ಮದುಸೂಧನ್ ಎಂ.ಆರ್. (ಐಎಎ, ಬೆಂಗಳೂರು), ಕಾಲ: 51.4 ಸೆ.; ಜಾವೆಲಿನ್ ಎಸೆತ: ಗಿರೀಶ್ ಕೆ.ಎಂ. (ಡಿಎಎ, ಶಿವಮೊಗ್ಗ) ದೂರ: 56.71 ಮೀ.; ಷಾಟ್‌ಪಟ್: ನಂದೀಶ್ ಕುಮಾರ್ ಎಸ್. (ಆಳ್ವಾಸ್) ದೂರ: 14.55 ಮೀ.; ಟ್ರಿಪಲ್ ಜಂಪ್: ಶಂಶೀರ್ (ಆಳ್ವಾಸ್), ದೂರ: 14.35 ಮೀ.

16 ವರ್ಷದೊಳಗಿನವರು: 200 ಮೀ: ಶ್ಯಾಮಸುಂದರ್ (ಚಿತ್ರದುರ್ಗ) ಕಾಲ: 23.8 ಸೆ.; 3000 ಮೀ. ಓಟ: ಯಲ್ಲಪ್ಪ ( ಚಂದರಗಿ ಕ್ರೀಡಾ ಶಾಲೆ) ಕಾಲ: 9.39 ಸೆ.; 100 ಮೀ ಹರ್ಡಲ್ಸ್: ಸಂತೋಷ್ ಬಿ. (ಡಿಎಎ ದ.ಕ.) ಕಾಲ-14.4 ಸೆ.; 400 ಮೀ ಹರ್ಡಲ್ಸ್: ಅಶೋಕ್ ಚವ್ಹಾಣ್ (ವಿಜಾಪುರ) ಕಾಲ: 53.6 ಸೆ.; ಜಾವೆಲಿನ್ ಎಸೆತ: ಮಿಥುನ್ ಆರ್.ಕೆ. (ಡಿ.ಎ.ಎ.ಶಿವಮೊಗ್ಗ) ದೂರ: 41.08 ಮೀ.; ಹೈಜಂಪ್:  ರವಿತೇಜ ಡಿ.ಎಸ್. (ಬೆಂಗಳೂರು), ಎತ್ತರ: 1.64 ಮೀ; ಪೆಂಟಾಥ್ಲಾನ್: ಶ್ರವಣ್ ಕುಮಾರ್ ಎಸ್. (ಆಳ್ವಾಸ್). 3068 ಪಾಯಿಂಟ್ಸ್;

14 ವರ್ಷದೊಳಗಿನವರು: ಶಾಟ್‌ಪುಟ್: ಮಸೂದ್ ಅಹಮ್ಮದ್ (ಆಳ್ವಾಸ್) ದೂರ: 12.44 ಮೀ.; ಲಾಂಗ್‌ಜಂಪ್: ಮೊಹಮ್ಮದ್ ರಹೀಲ್ (ದ.ಕ.), ದೂರ: 5.30 ಮೀ.;  

ಮಹಿಳೆಯರು: 200 ಮೀ: ಪ್ರಿಯಾಂಕಾ ಎಸ್.ಕೆ. (ಎಸ್‌ಎಐ, ಧಾರವಾಡ), ಕಾಲ: 26.2 ಸೆ.; ಲಾಂಗ್‌ಜಂಪ್: ಜಾಲಿ ವಿ.ಎಂ.(ಆಳ್ವಾಸ್) ದೂರ: 5.54 ಮೀ.; ಟ್ರಿಪಲ್ ಜಂಪ್: ಜಾಯ್ಲಿನ್ ಎಂ.ಲೋಬೊ (ಆಳ್ವಾಸ್), ದೂರ: 11.97 ಮೀ.; ಹ್ಯಾಮರ್ ಎಸೆತ: ವಿಭಾ ಬಿ.ಶಂಕರ್ (ಆಳ್ವಾಸ್) ದೂರ: 36.56 ಮೀ.; 

20 ವರ್ಷದೊಳಗಿನವರು: 200 ಮೀ. ಓಟ: ಬಾಬಿ ಸುಮಯ್ಯಾ (ಡಿವೈಎಸ್‌ಸ್ ಮೈಸೂರು), ಕಾಲ: 25.1ಸೆ.; 5000 ಮೀ. ಓಟ: ಅರ್ಚನಾ ಕೆ.ಎಂ. (ಆಳ್ವಾಸ್), ಕಾಲ: 19.56.9 ಸೆ.; 1600 ಮೀ ರಿಲೇ: ಡಿವೈಎಸ್‌ಎಸ್,  ಮೈಸೂರು, ಕಾಲ: 4.06.1ಸೆ.; ಡಿಸ್ಕ್‌ಸ್ ಎಸೆತ: ಹಿಮಾನಿ ಪಿ.ಹೆಗ್ಡೆ (ಉಡುಪಿ) ದೂರ: 31.14 ಮೀ.; ಹ್ಯಾಮರ್ ಎಸೆತ: ವಿಭಾ ಬಿ.ಶಂಕರ್ (ಆಳ್ವಾಸ್) ದೂರ-37.40 ಮೀ.; ಟ್ರಿಪಲ್ ಜಂಪ್: ಜಾಯ್ಲಿನ್ ಎಂ.ಲೋಬೊ (ಆಳ್ವಾಸ್), ದೂರ: 12.25 ಮೀ.; ಲಾಂಗ್‌ಜಂಪ್: ಜಾಲಿ ವಿ.ಎಂ. (ಆಳ್ವಾಸ್), ದೂರ: 5.43 ಮೀ.; ಪೋಲ್‌ವಾಲ್ಟ್: ಕೀರ್ತಿ (ಉಡುಪಿ) ಎತ್ತರ: 2.35 ಮೀ.; ಹೆಪ್ಟಾಥ್ಲಾನ್: ಪ್ರಜ್ಞಾ ಎಸ್.ಪ್ರಕಾಶ್ (ಇಂಡೋ ಜರ್ಮನ್) 4042 ಪಾಯಿಂಟ್ಸ್.

18 ವರ್ಷದೊಳಗಿನವರು: 200 ಮೀ ಓಟ: ಭಾವಿ ಬಿ.ಶಂಕರ್ (ಆಳ್ವಾಸ್) ಕಾಲ: 26.6 ಸೆ.; ಲಾಂಗ್‌ಜಂಪ್: ಮನೀಷಾ (ಆಳ್ವಾಸ್), ದೂರ: 5.46 ಮೀ; ಟ್ರಿಪಲ್ ಜಂಪ್: ಚಾಂದನಿ (ಆಳ್ವಾಸ್) ದೂರ: 11.80 ಮೀ.; ಜಾವೆಲಿನ್ ಎಸೆತ: ರಶ್ಮಿ ಕೆ. (ಆಳ್ವಾಸ್)ದೂರ-39.16 ಮೀ. ಹ್ಯಾಮರ್ ಎಸೆತ: ರಶ್ಮಿ ಕೆ. (ಆಳ್ವಾಸ್) ದೂರ: 34.15 ಮೀ.; ಷಾಟ್‌ಪಟ್: ನಿಶಾ ಯು. (ಆಳ್ವಾಸ್), ದೂರ: 10.28 ಮೀ.; 

16 ವರ್ಷದೊಳಗಿನವರು: 200 ಮೀ ಓಟ: ವರ್ಷಾ ಆರ್. (ದ.ಕ.) ಕಾಲ-26.9ಸೆ.; 3000 ಮೀ. ಓಟ: ಪಲ್ಲವಿ ಎಚ್.ಆರ್. (ಮಡಿಕೇರಿ) ಕಾಲ-11.02.9 ಸೆ.; 110 ಮೀ. ಹರ್ಡಲ್ಸ್: ವೀಣಾ ಎಚ್.ಎ. (ಆಳ್ವಾಸ್) ಕಾಲ: 16.1ಸೆ.; ಜಾವೆಲಿನ್ ಎಸೆತ: ನಮಿತಾ ಜಿ.ಕೆ. (ಆಳ್ವಾಸ್) ದೂರ: 26.46 ಮೀ; ಎತ್ತರ ಜಿಗಿತ: ಜೀನ್ಲೆಸ್ವಿ ಒಲಿವೆರಾ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್) ಎತ್ತರ: 1.51 ಮೀ; ಡಿಸ್ಕಸ್ ಎಸೆತ: ಪ್ರಿಯಾಂಕಾ ಜೆ.ಎಸ್. (ದ.ಕ.) ದೂರ: 35 ಮೀ.; ಪೆಂಟಾಥ್ಲಾನ್: ವೈಶಾಲಿ ಸೌಮ್ಯ (ಇಂಡೋ ಜರ್ಮನ್) 2315 ಪಾಯಿಂಟ್ಸ್; 14 ವರ್ಷದೊಳಗಿನವರು: ಲಾಂಗ್‌ಜಂಪ್: ನಿಶ್ಮಿತಾ (ಡಿವೈಎಸ್‌ಎಸ್, ವಿದ್ಯಾನಗರ) ದೂರ: 4.75 ಮೀ.; ಷಾಟ್‌ಪಟ್: ನಿವೇದಿತಾ ಪಿ.ಸಾವಂತ್ (ಉ.ಕ.), ದೂರ: 9.01 ಮೀ.

ತಂಡ ಪ್ರಶಸ್ತಿ: ಬಾಲಕಿಯರು: 14 ವರ್ಷದೊಳಗಿನವರ ವಿಭಾಗ- ಉತ್ತರ ಕನ್ನಡ; 16, 18, 20 ವರ್ಷ ಮಹಿಳಾ ವಿಭಾಗ: ಆಳ್ವಾಸ್ ಕ್ರೀಡಾ ಕ್ಲಬ್, ಮೂಡುಬಿದಿರೆ. ಬಾಲಕರು:  (14ವರ್ಷ) ದ.ಕ. ಜಿಲ್ಲೆ ತಂಡ, 16, 18 ಮತ್ತು 20 ವರ್ಷದೊಳಗಿನವರು: ಆಳ್ವಾಸ್ ಕ್ರೀಡಾ ಕ್ಲಬ್. ಪುರುಷರ ವಿಭಾಗ: ಎಂಇಜಿ ಸೆಂಟರ್, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry