ಆಳ್ವಾಸ್ ತಂಡ ಚಾಂಪಿಯನ್

7

ಆಳ್ವಾಸ್ ತಂಡ ಚಾಂಪಿಯನ್

Published:
Updated:

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಕೇರಳದ ತಿರುವನಂತಪುರದಲ್ಲಿ ಕೇರಳ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಜರುಗಿದ ಅಖಿಲ ಭಾರತ ಆಹ್ವಾನಿತ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.ಆಳ್ವಾಸ್ ತಂಡ ಕೊಟ್ಟಾಯಂನ ಮಹಾತ್ಮ ಗಾಂಧಿ ವಿ.ವಿ, ಕೆ.ಎಸ್.ಸಿ. ವೆಲವೂರು, ಲೇಡಿ ಶಿವಸ್ವಾಮಿ ಅಯ್ಯರ್ ತಮಿಳ್ನಾಡು ಹಾಗೂ ಪ್ಲಾಜಾ ತಿರುವನಂತಪುರ ತಂಡಗಳನ್ನು ನೇರ ಸೆಟ್‌ಗಳಿಂದ ಸೋಲಿಸಿ ಫೈನಲ್‌ನಲ್ಲಿ ಚೆನ್ನೈನ ಎಸ್.ಆರ್. ಎಂ. ವಿ.ವಿ. ತಂಡವನ್ನು 29-19 ಹಾಗೂ 29-24 ರಿಂದ ಸೋಲಿಸಿತು. ಆಳ್ವಾಸ್‌ನ ಜಿ.ಎಸ್.ಪೂರ್ಣಿಮಾ  `ಉತ್ತಮ ಆಟಗಾರ್ತಿ' ಪ್ರಶಸ್ತಿ ಪಡೆದುಕೊಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry