ಬುಧವಾರ, ಜೂನ್ 16, 2021
28 °C

ಆವಣಿ: ವೈವಿಧ್ಯಮಯ ವಸ್ತು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನ ಆವಣಿ­ಯಲ್ಲಿ ರಾಮಲಿಂಗೇಶ್ವರ ರಥೋ­ತ್ಸವದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶನಿ­ವಾರದಿಂದ ಏರ್ಪಡಿಸಿರುವ ವಾರ್ಷಿಕ ವಸ್ತು ಪ್ರದರ್ಶನ ವೈವಿಧ್ಯತೆಯಿಂದ ಗಮನ ಸೆಳೆಯುತ್ತಿದೆ.ಉದ್ಯೋಗಿನಿ, ಕಿರುಸಾಲ ಯೋಜನೆ ಮಹಿಳಾ ಉದ್ಯಮಿಗಳು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘ­ಗಳ ಉದ್ದಿಮೆದಾರರರು ತಯಾ­ರಿಸಿದ ಆಕರ್ಷಕ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಾತ್ರೆಯ ಸ್ಥಳದಲ್ಲಿ ಶಾಸಕ ಜಿ.ಮಂಜುನಾಥ್ ಚಾಲನೆ ನೀಡಿ­ದ್ದರು. ನಂತರ ಮೇಳಕ್ಕೆ ಸಾವಿರಾರು ಮಂದಿ ಭೇಟಿ ನೀಡಿದ್ದರು. ರಥೋ­ತ್ಸವದ ಮಾರನೇ ದಿನವಾದ ಭಾನು­ವಾರ ರಜೆ ಪರಿಣಾಮವಾಗಿ ಮೇಳ­ದಲ್ಲಿ ಜನಜಂಗುಳಿ ಏರ್ಪಟ್ಟಿತ್ತು.ತಾಲ್ಲೂಕಿನ 20 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ಜಿಲ್ಲೆಯ ಇತರೆ ತಾಲ್ಲೂಕುಗಳ 10 ಸ್ವ­ಸಹಾಯ ಸಂಘಗಳು ಸೇರಿದಂತೆ ಒಟ್ಟು 30 ಸಂಘಗಳ ನೂರಾರು ಕಾರ್ಯ­ಕರ್ತೆಯರು ಮೇಳದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.ರುಚಿಯಾದ ತಿಂಡಿ ತಿನಿಸುಗಳು, ನೈಸರ್ಗಿಕ ವಸ್ತುಗಳಿಂದ ಮಾಡಿರುವ ಸಾಂಬಾರ ಪದಾರ್ಥಗಳು, ಉಪ್ಪಿನ­ಕಾಯಿ, ಚಟ್ನಿಪುಡಿ, ಬುಟ್ಟಿ, ಕೈಚೀಲ­ಗಳು, ರಾಗಿ ಮಾಲ್ಟ್, ರಾಗಿ ಶಾವಿಗೆ, ಮನೆ ಅಲಂಕಾರಕ್ಕೆ ಬಳಸುವ ವಸ್ತು­ಗಳು,  ರೇಷ್ಮೆ ಗೂಡಿನಿಂದ ತಯಾ­­ರಿ­­ಸಿ­ರುವ ಹಾರಗಳು, ಮರದ ಗೊಂಬೆ­ಗಳು, ಚರ್ಮದಿಂದ ತಯಾ­ರಿಸಿದ ವಸ್ತು­ಗಳು, ಮೇಣದ ಬತ್ತಿ­ಗಳು ಜನರ ಗಮನ ಸೆಳೆಯುತ್ತಿದೆ.

ಮೇಳ ಸೋಮವಾರ ಮುಕ್ತಾಯ­ವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.