ಆವರಣದ ಒಳಗೆ ಹಸಿರಿನ ಸೊಬಗು

7

ಆವರಣದ ಒಳಗೆ ಹಸಿರಿನ ಸೊಬಗು

Published:
Updated:
ಆವರಣದ ಒಳಗೆ ಹಸಿರಿನ ಸೊಬಗು

ಸುಂದರ ಕನಸಿನ ಮನೆಯನ್ನು ಕಟ್ಟಿಕೊಂಡ ಮೇಲೆ ಅದರಲ್ಲಿ ಕೈ ತೋಟವಿಲ್ಲದಿದ್ದರೆ ಅದು ಬರೀ ಇಟ್ಟಿಗೆ ಮರಳು ಕಲ್ಲಿನ ಕಟ್ಟಡವಾದೀತು. ಫ್ಲಾಟ್‌ಗಳಲ್ಲಿ ಜೀವನ ನಡೆಸುವವರು ಏನಿಲ್ಲವೆಂದರೂ ಹತ್ತಾರು ಕುಂಡಗಳಲ್ಲಿ ಚಿಕ್ಕಪುಟ್ಟ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವವರು ಅನೇಕ ಮಂದಿ. ದೈವಿಕತೆಯ ಸಂಕೇತವಾದ, ದೈವಿಕ ಭಾವನೆ ಮೂಡಿಸುವ ಒಂದು ತುಳಸಿ ಗಿಡವಾದರೂ ಕಂಡುಬರುತ್ತದೆ ಅನೇಕ ಪುಟ್ಟ ಪುಟ್ಟ ಮನೆಗಳಲ್ಲಿ.ಏತಕ್ಕೆ ನಾವು ಕೈತೋಟ ಮಾಡಬೇಕು? ಯಾಕೆ ಸುಮ್ಮನೆ ತಿಂಗಳಿಗೆ ಕೆಲ ನೂರು ರೂಪಾಯಿಗಳನ್ನು ಸುರಿಯುತ್ತೀರಿ? ಅದೇ ದುಡ್ಡು ಬೇರಾವುದಕ್ಕೆ ಆದರೂ ಆಗುವುದಿಲ್ಲವೆ? ಹೀಗೆ ಹಲವಾರು ಪ್ರಶ್ನೆಗಳಿಂದ ನನ್ನನ್ನು ಎದುರಿಸುತ್ತಾರೆ ಸುತ್ತಮುತ್ತಲಿನ ಜನಗಳು.

ನನ್ನ ಉತ್ತರ ಒಂದೇ. ತೃಪ್ತಿಯನ್ನು ಹಣದಿಂದ ಕೊಳ್ಳಲಾಗದು.ಅದು ಹಾಗಿದ್ದಲ್ಲಿ ಬಹುಶಃ ಕೈತೋಟ ಮಾಡುತ್ತಿರಲಿಲ್ಲ. ಎಷ್ಟೋ ಬಾರಿ, ಮನೆಯ ಆವರಣದ ಒಳಗಿನ ಮತ್ತು ನಡುವಿನ ಹಸಿರನ್ನು ವೀಕ್ಷಿಸಿದಾಗ ಕಂಡುಬರುವುದು ಅವುಗಳ ನಿಸ್ವಾರ್ಥತೆ- ತನ್ನನ್ನೆ ತಾನೆ ಸೂರ್ಯನಿಗೆ ಒಡ್ಡಿಕೊಂಡು ನಮಗೆ ನೀಡುವ ಫಲ. ಇದಕ್ಕೆ ಯಾರು ಬೆಲೆ ಕಟ್ಟುವವರು? ತನ್ನನ್ನು ಆಶ್ರಯಿಸುವ ಜೀವಿಗಳಿಗೆ ಆಸರೆ ನೀಡುವ ಬದುಕು ಮರಗಿಡಗಳದು. ಮನುಕುಲಕ್ಕೆ ಒದಗಿಸುತ್ತಿರುವ ಉಸಿರಾಟದ ಮುಖ್ಯ ಪಾತ್ರ ಅವುಗಳದು.

 

ಮನೆಯನ್ನು ನಿರ್ಮಿಸುವಾಗ ನಾವು ಕಡಿದುಹಾಕಿದ ಮರಗಳ ಲೆಕ್ಕ, ಭೂಮಿತಾಯಿಯನ್ನು ಅಗೆದಗೆದು ಇಟ್ಟಿಗೆ ಸಿಮೆಂಟ್ ಮರಳಿನ ಮಿಶ್ರಣದ ಬುನಾದಿ, ಅಂದದ ಮನೆ ನಿರ್ಮಾಣದ ಹಂತದಲ್ಲಿ ಬೊಂಬುಗಳ ರಾಶಿ, ಮರದ ಪೀಠೋಪಕರಣಗಳನ್ನು ತಂದು ಅಲಂಕರಿಸಿದ ಆವರಣ, ಇತ್ಯಾದಿ.....ಇವುಗಳ ಋಣವನ್ನು ಒಂದು ಚಿಕ್ಕ ಕೈತೋಟ ಬೆಳೆಯುವುದರಲ್ಲಿ ಸಾಕಾರಗೊಳಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry