ಆಶಾಕಿರಣ ಟ್ರಸ್ಟ್ ಚಾಂಪಿಯನ್

7

ಆಶಾಕಿರಣ ಟ್ರಸ್ಟ್ ಚಾಂಪಿಯನ್

Published:
Updated:

ದಾವಣಗೆರೆ: ಅಂಗವಿಕಲರ ಆಶಾಕಿರಣ ಟ್ರಸ್ಟ್ ತಂಡ ಇಲ್ಲಿ ಕೊನೆಗೊಂಡ ರಾಜ್ಯ ಮಟ್ಟದ ಕಡಿಮೆ ಸಾಮರ್ಥ್ಯದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಯಿತು.ಬುದ್ಧಿಮಾಂಧ್ಯ ಮಕ್ಕಳಿಗಾಗಿ ಕರ್ನಾಟಕ ರಾಜ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಅಂಗವಿಕಲರ ಆಶಾಕಿರಣ ಟ್ರಸ್ಟ್ ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಈ ಕ್ರೀಡಾಕೂಟವನ್ನು ಆಯೋಜಿಸಿತ್ತು. ಕೊಡಗಿನ ಶುಂಠಿಕೊಪ್ಪದ ಸ್ವಸ್ಥ ವಿಶೇಷ ಶಾಲೆ ರನ್ನರ್‌ಅಪ್ ಸ್ಥಾನ ತನ್ನದಾಗಿಸಿಕೊಂಡಿತು.ಕೂಟದಲ್ಲಿ ಆಯೋಜಿಸಲಾದ ಬಾಚಿ ಆಟದ ಫಲಿತಾಂಶ: ಪುರುಷರ ವಿಭಾಗ: ಉಡುಪಿ ಜಿಲ್ಲೆ ಕಾರ್ಕಳದ ಚೇತನಾ ವಿಶೇಷ ಶಾಲೆ (ಪ್ರಥಮ), ಮಂಗಳೂರಿನ ಸಾನಿಧ್ಯ ಅಂಗವಿಕಲ ಮಕ್ಕಳ ವಸತಿ ಶಾಲೆ (ದ್ವಿತೀಯ), ಮಂಗಳೂರು ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆ (ತೃತೀಯ).ಮಹಿಳೆಯರ ವಿಭಾಗ: ಮಂಗಳೂರಿನ ಸಾನಿಧ್ಯ ಅಂಗವಿಕಲ ಮಕ್ಕಳ ವಸತಿ ಶಾಲೆ (ಪ್ರಥಮ), ಅಂಗವಿಕಲರ ಆಶಾಕಿರಣ ಟ್ರಸ್ಟ್ (ದ್ವಿತೀಯ), ಕೊಡಗಿನ ಶುಂಠಿಕೊಪ್ಪದ ಸ್ವಸ್ಥ ವಿಶೇಷ ಶಾಲೆ (ತೃತೀಯ).

ಶಿಸ್ತಿನ ಪಥಸಂಚಲನ ನಡೆಸಿದ ಕೊಡಗಿನ ಸ್ವಸ್ಥ ವಿಶೇಷ ಶಾಲೆ (ಪ್ರಥಮ), ಮಂಗಳೂರಿನ ಸಾನಿಧ್ಯ (ದ್ವಿತೀಯ) ಹಾಗೂ ಲಯನ್ಸ್ ವಿಶೇಷ ಶಾಲೆ ಸುರತ್ಕಲ್ (ತೃತೀಯ) ಸ್ಥಾನವನ್ನು ಪಡೆದುಕೊಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry