`ಆಶಾವಾದಿಗಳಾಗಿ ಜೀವನದಲ್ಲಿ ಕನಸು ಕಾಣಿ'

7

`ಆಶಾವಾದಿಗಳಾಗಿ ಜೀವನದಲ್ಲಿ ಕನಸು ಕಾಣಿ'

Published:
Updated:

ಹೊಸಕೋಟೆ: `ಪ್ರತಿ ವಿದ್ಯಾರ್ಥಿ ಆತ್ಮವಿಶ್ವಾಸ ಬೆಳೆಸಿಕೊಂಡು ಆಶಾವಾದಿಗಳಾಗಿ ಜೀವನದಲ್ಲಿ ಕನಸು ಕಾಣಬೇಕು' ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಕಿವಿಮಾತು ಹೇಳಿದರು.ತಾಲ್ಲೂಕಿನ ಕಲ್ಕುಂಟೆ ಗ್ರಾಮದ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.`ಗುರಿ ಹಾಗೂ ಪರಿಶ್ರಮದ ಮೂಲಕ ಹೆಚ್ಚು ಜ್ಞಾನ ಪಡೆದಾಗ ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ಪ್ರತಿ ವಿದ್ಯಾರ್ಥಿಯು ಸಮಯಕ್ಕೆ ಅಧಿಕ ಮಹತ್ವ ಕೊಡಬೇಕು. ಐವರು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಲು ಮುಂದಾಗಬೇಕು' ಎಂದರು.ಸಚಿವ ಬಿ.ಎನ್.ಬಚ್ಚೇಗೌಡ ಮಾತನಾಡಿ, `ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲು ಅನುಮತಿ ನೀಡಲಾಗುವುದು' ಎಂದು ಭರವಸೆ ನೀಡಿದರು. ರಕ್ಷಣಾ ಸಚಿವಾಲಯದ ನಿವೃತ್ತ ಸಲಹೆಗಾರ ಡಾ.ವಿ.ಕೆ.ಅತ್ರೆ, ಜಿ.ಪಂ. ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ, ಸತ್ಯಸಾಯಿ ಸೇವಾಶ್ರಮದ ಮಾಜಿ ಸಂಚಾಲಕ ಬಿ.ಎನ್.ನರಸಿಂಹಮೂರ್ತಿ, ಶಾಲೆಯ ಅಧ್ಯಕ್ಷ ಎಚ್.ಎಸ್.ಬಸವರಾಜು ಉಪಸ್ಥಿತರಿದ್ದರು.ಈ ಸಂದರ್ಭ ರಂಗನಾಥ ಪ್ರೌಢ ಶಾಲೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry