ಸೋಮವಾರ, ಡಿಸೆಂಬರ್ 16, 2019
17 °C

ಆಶಿಶ್ ಅಂತರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಶಿಶ್ ಅಂತರಾಳ

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೇ ವಸ್ತುವಾಗುಳ್ಳ ಚಿತ್ರವೊಂದು ತಯಾರಾಗುತ್ತಿದ್ದು, ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿರುವ ಆಶಿಶ್ ವಿದ್ಯಾರ್ಥಿ, `ಅಧಿಕಾರಿ ವರ್ಗದಲ್ಲಿ `ಹೋಗಲಿ ಬಿಡಿ' ಎಂಬ ಧೋರಣೆ ಬೇರೂರಿರುವುದೇ ಇಂಥ ಘಟನೆಗಳಿಗೆ ಕಾರಣ' ಎಂದಿದ್ದಾರೆ. `ನಿರ್ಭಯ್' ಚಿತ್ರದಲ್ಲಿ ನಟಿಸುತ್ತಿರುವ ಆಶಿಶ್ ಅತ್ಯಾಚಾರ ಪ್ರಕರಣ ಹಾಗೂ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದ್ದಾರೆ.`ದೇಶದಲ್ಲಿ ನಡೆಯುತ್ತಿರುವ ಬಹುತೇಕ ಅತ್ಯಾಚಾರ ಪ್ರಕರಣಗಳು ಪತ್ತೆಯಾಗದೆ ಸತ್ತುಹೋಗಲು ಈ ರೀತಿಯ ಮನಸ್ಥಿತಿ ಕಾರಣ. ಇಲ್ಲಿ ಯಾವುದೂ ಬದಲಾಗದು. ಜನ ಪ್ರತಿನಿಧಿಗಳು, ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್‌ಗಳಿಂದ ಡಿಐಜಿವರೆಗೂ ಇದೇ ರೀತಿಯ ಧೋರಣೆ ಇರುವುದರಿಂದ ಈ ವ್ಯವಸ್ಥೆ ಕುರಿತು ಜನರು ಭಯಭೀತರಾಗಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.`ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾನು, ಜನರ ಕರುಣೆಯನ್ನು ಸಿಟ್ಟು ಹಾಗೂ ಪ್ರತಿಭಟನೆಯತ್ತ ಪರಿವರ್ತಿಸುವ ಕೆಲಸ ಮಾಡಿದ್ದೇನೆ. ಚಿತ್ರದ ನಿರ್ದೇಶಕ ಮಿಲನ್ ಭೌಮಿಕ್ ಡಿಜಿಪಿ ಪಾತ್ರ ನಿರ್ವಹಿಸುವಂತೆ ಕೇಳಿಕೊಂಡರು. ನಾನು ಮರುಮಾತನಾಡದೆ ಒಪ್ಪಿಕೊಂಡೆ. ಆಡಳಿತವರ್ಗ ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದರೆ ಮಾಧ್ಯಮ ಹಾಗೂ ಜನತೆ ಎಚ್ಚೆತ್ತು ಅದರ ವಿರುದ್ಧ ಹೇಗೆ ಪ್ರತಿಭಟನೆಗೆ ಮುಂದಾಗುತ್ತಾರೆ ಎಂಬುದನ್ನು ನಿರ್ದೇಶಕರು ಮನಸ್ಸಿಗೆ ತಾಕುವಂತೆ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ' ಎಂದು ಆಶಿಶ್ ವಿದ್ಯಾರ್ಥಿ, ಚಿತ್ರದ ಪ್ರಮುಖ ಅಂಶಗಳ ಕುರಿತು ವಿವರಿಸಿದ್ದಾರೆ.

 

ಪ್ರತಿಕ್ರಿಯಿಸಿ (+)