`ಆಶೀರ್ವಾದ ಸಿಕ್ಕರೆ ಇನ್ನಷ್ಟು ಕಾಲ ಆಳ್ವಿಕೆ'

7
ಸ್ವಾಮೀಜಿಗಳ ಸಮ್ಮುಖದಲ್ಲಿ ಶೆಟ್ಟರ್ ಜನ್ಮದಿನ

`ಆಶೀರ್ವಾದ ಸಿಕ್ಕರೆ ಇನ್ನಷ್ಟು ಕಾಲ ಆಳ್ವಿಕೆ'

Published:
Updated:

ಹುಬ್ಬಳ್ಳಿ: ಹಲವು ಪ್ರಮುಖ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಸಾರ್ವಜನಿಕವಾಗಿ 58ನೇ ಹುಟ್ಟುಹಬ್ಬವನ್ನು ಸೋಮವಾರ ಇಲ್ಲಿ ಆಚರಿಸಿಕೊಂಡ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಇನ್ನಷ್ಟು ಕಾಲ ಅಧಿಕಾರದಲ್ಲಿ ಮುಂದುವರಿಯಲು ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ಕೋರುವ ಮೂಲಕ ಪರೋಕ್ಷವಾಗಿ `ಸಮುದಾಯದ ನಾಯಕ'ನಾಗಿ ತಮ್ಮನ್ನು ಬಿಂಬಿಸಿಕೊಂಡರು.ಜಗದೀಶ ಶೆಟ್ಟರ್ ಅಭಿಮಾನಿ ಬಳಗ ಕುಸುಗಲ್ಲ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್‌ನಲ್ಲಿ ಏರ್ಪಡಿಸಿದ್ದ ಜನ್ಮದಿನ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಗದುಗಿನ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ, ಹುಬ್ಬಳ್ಳಿಯ ರಾಮಕೃಷ್ಣ- ವಿವೇಕಾನಂದ ಆಶ್ರಮದ ರಘುವೀರಾನಂದ ಸ್ವಾಮೀಜಿ ಹಾಜರ್ದ್ದಿದು ಆಶೀರ್ವಾದಿಸಿದರು.ನಂತರ ಮಾತನಾಡಿದ ಶೆಟ್ಟರ್, `ಸ್ವಾಮೀಜಿಗಳ ಆಶೀರ್ವಾದದಿಂದ ಶಕ್ತಿ ಬಂದಿದೆ. ಇದು ಹೀಗೆಯೇ ಮುಂದುವರಿದರೆ ರಾಜ್ಯವನ್ನು ದೇಶಕ್ಕೇ ಮಾದರಿಯಾಗಿಸುವ ಪಣ ತೊಡುತ್ತೇನೆ' ಎಂದು ಘೋಷಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry